ಹೈದರಾಬಾದ್(ಆ.30): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಟೂರ್ನಿಯಲ್ಲಿ ಪದಕ ಗೆದ್ದ ಬೆನ್ನಲ್ಲೇ, ಸೈನಾ ನೆಹ್ವಾಲ್‌ ತಂದೆ ಡಾ! ಹರ್ವಿರ್ ಸಿಂಗ್ ರಿಂಗ್ ಉಡುಗೊರೆ ನೀಡಿದ್ದಾರೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸೆಮಿಫೈನಲ್ ಪಂದ್ಯದಲ್ಲಿ ತೈ ಝು ಯಿಂಗ್ ವಿರುದ್ಧ 17-21, 14-21 ಅಂತರದಲ್ಲಿ ಸೋಲು ಅನುಭವಿಸಿದ್ದರು. ಈ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.  

 

 

ಸೈನಾ ಕಂಚಿನ ಪದಕದ ಸಾಧನೆಗೆ ತಂದೆ ಹರ್ವಿರ್ ಸಿಂಗ್ ಉಂಗುರವನ್ನ ಗಿಫ್ಟ್ ನೀಡಿದ್ದಾರೆ. ಈ ಕುರಿತು ಸೈನಾ ನೆಹ್ವಾಲ್ ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ ಪ್ರೀತಿಯ ಉಡುಗೊರೆ ನೀಡಿದ ತಂದೆಗೆ ಧನ್ಯವಾದ ಹೇಳಿದ್ದಾರೆ.