ಕೊರಿಯಾ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಸೈನಾ
5ನೇ ಶ್ರೇಯಾಂಕಿತೆ ಸೈನಾ, ಕ್ವಾರ್ಟರ್‌ಫೈನಲ್‌ನಲ್ಲಿ 2017ರ ವಿಶ್ವ ಚಾಂಪಿಯನ್, 3ನೇ ಶ್ರೇಯಾಂಕಿತೆ ಜಪಾನ್‌ನ ನಜೋಮಿ ಒಕುಹಾರರನ್ನು ಎದುರಿಸಲಿದ್ದಾರೆ. ಜಪಾನ್ ಆಟಗಾರ್ತಿ ವಿರುದ್ಧ ಸೈನಾ 6-3 ಗೆಲುವು-ಸೋಲಿನ ದಾಖಲೆ ಹೊಂದಿದ್ದರೂ, ಕಳೆದ 2 ಮುಖಾಮುಖಿಗಳಲ್ಲಿ ಭಾರತೀಯ ಆಟಗಾರ್ತಿ ಸೋಲುಂಡಿದ್ದರು.
ಸೋಲ್(ಸೆ.28): ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಸೈನಾ, ಕೊರಿಯಾದ ಕಿಮ್ ಗಾ ಯುನ್ ವಿರುದ್ಧ 21-18, 21-18 ನೇರ ಗೇಮ್‌ಗಲ್ಲಿ ಗೆಲುವು ಸಾಧಿಸಿದರು. ಕೇವಲ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ ಪ್ರಾಬಲ್ಯ ಮೆರೆದರು.
5ನೇ ಶ್ರೇಯಾಂಕಿತೆ ಸೈನಾ, ಕ್ವಾರ್ಟರ್‌ಫೈನಲ್‌ನಲ್ಲಿ 2017ರ ವಿಶ್ವ ಚಾಂಪಿಯನ್, 3ನೇ ಶ್ರೇಯಾಂಕಿತೆ ಜಪಾನ್‌ನ ನಜೋಮಿ ಒಕುಹಾರರನ್ನು ಎದುರಿಸಲಿದ್ದಾರೆ. ಜಪಾನ್ ಆಟಗಾರ್ತಿ ವಿರುದ್ಧ ಸೈನಾ 6-3 ಗೆಲುವು-ಸೋಲಿನ ದಾಖಲೆ ಹೊಂದಿದ್ದರೂ, ಕಳೆದ 2 ಮುಖಾಮುಖಿಗಳಲ್ಲಿ ಭಾರತೀಯ ಆಟಗಾರ್ತಿ ಸೋಲುಂಡಿದ್ದರು.
ಜನವರಿಯಲ್ಲಿ ಇಂಡೋನೇಷ್ಯಾ ಮಾಸ್ಟರ್ಸ್ನಲ್ಲಿ ಫೈನಲ್‌ಗೇರಿದ್ದ ಸೈನಾ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಈ ವರ್ಷ ಅದೊಂದೇ ಪ್ರಶಸ್ತಿ ಅವರು ಗೆದ್ದಿರುವುದು.