ಲಂಡನ್(ಆ.09): ಭಾರತ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.  ಇನ್ನೇನು ಕೆಲೆವೇ ಕ್ಷಣಗಳಲ್ಲಿ ಮಹತ್ವದ ಪಂದ್ಯ ಆರಂಭಗೊಳ್ಳಲಿದೆ. ಲಾರ್ಡ್ಸ್ ಮೈದಾನದ ಸಂಪ್ರದಾಯದ ಪ್ರಕಾರ, ಈ ಬಾರಿ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಲಾರ್ಡ್ಸ್ ಟೆಸ್ಟ್ ಗಂಟೆ ಬಾರಿಸಲಿದ್ದಾರೆ.

ಲಾರ್ಡ್ಸ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆರಂಭಕ್ಕೂ ಮುನ್ನ ಬೌಲರ್ ಎಂಡ್‌ನಲ್ಲಿ ಇಡಲಾಗಿರುವ ಗಂಟೆಯನ್ನ ಬಾರಿಸಲಾಗುತ್ತೆ. ವಿಶೇಷ ಆಹ್ವಾನಿತ ಮಾಜಿ ಕ್ರಿಕೆಟಿಗರು ಗಂಟೆ ಬಾರಿಸೋ ಮೂಲಕ ಲಾರ್ಡ್ಸ್ ಪಂದ್ಯಕ್ಕೆ ಚಾಲನೆ ನೀಡಲಾಗುತ್ತದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನ ಟೆಸ್ಟ್ ಪಂದ್ಯಕ್ಕೆ ಸಚಿನ್ ಹಾಗೂ ರವಿ ಶಾಸ್ತ್ರಿ ಗಂಟೆ ಬಾರಿಸೋ ಮೂಲಕ ಚಾಲನೆ ನೀಡಡ

 2007ರಿಂದ ಆರಂಭಗೊಂಡಿರುವ ಗಂಟೆ ಬಾರಿಸೋ ಸಂಪ್ರದಾಯ ಹೆಚ್ಚು ಜನಪ್ರೀಯವಾಗಿದೆ. ಇಲ್ಲೀವರಗೆ ಭಾರತ ಸುನಿಲ್ ಗವಾಸ್ಕರ್, ದಿ.ಮನ್ಸೂರ್ ಆಲಿ ಖಾನ್ ಪಟೌಡಿ, ದೀಲಿಪ್ ವೆಂಗಸರ್ಕರ್, ರಾಹುಲ್ ದ್ರಾವಿಡ್, ಕಪಿಲ್ ದೇವ್ ಹಾಗೂ ಸೌರವ್ ಗಂಗೂಲಿ ಲಾರ್ಡ್ಸ್ ಗಂಟೆ ಬಾರಿ ಪಂದ್ಯಕ್ಕೆ ಚಾಲನೆ ನೀಡಿದ್ದಾರೆ.