ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಸೆಮಿಗೆ ಸಾತ್ವಿಕ್-ಚಿರಾಗ್ ಲಗ್ಗೆ
ಶುಕ್ರವಾರ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್‌ನಲ್ಲಿ ವಿಶ್ವ ನಂ.2 ಸಾತ್ವಿಕ್-ಚಿರಾಗ್, ಚೀನಾದ ರೆನ್ ಕ್ಷಿಯಾಂಗ್ ಯು ಹಾಗೂ ಹೆ ಜಿ ಟಿಂಗ್ ವಿರುದ್ಧ 21-11, 21-18ರಲ್ಲಿ ಗೆಲುವು ಸಾಧಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 32ನೇ ಸ್ಥಾನದಲ್ಲಿರುವ ಚೀನಾ ಜೋಡಿ ವಿರುದ್ಧ ಭಾರತೀಯರಿಗೆ 35 ನಿಮಿಷಗಳಲ್ಲೇ ಸುಲಭ ಜಯ ಲಭಿಸಿತು.
ಕೌಲಾಲಂಪುರ: ಭಾರತದ ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಅಶ್ವಿನಿ ಪೊನ್ನಪ್ಪ-ತನೀಶಾ ಕ್ರಾಸ್ಟೋ ಅಭಿಯಾನ ಕೊನೆಗೊಳಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್‌ನಲ್ಲಿ ವಿಶ್ವ ನಂ.2 ಸಾತ್ವಿಕ್-ಚಿರಾಗ್, ಚೀನಾದ ರೆನ್ ಕ್ಷಿಯಾಂಗ್ ಯು ಹಾಗೂ ಹೆ ಜಿ ಟಿಂಗ್ ವಿರುದ್ಧ 21-11, 21-18ರಲ್ಲಿ ಗೆಲುವು ಸಾಧಿಸಿದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 32ನೇ ಸ್ಥಾನದಲ್ಲಿರುವ ಚೀನಾ ಜೋಡಿ ವಿರುದ್ಧ ಭಾರತೀಯರಿಗೆ 35 ನಿಮಿಷಗಳಲ್ಲೇ ಸುಲಭ ಜಯ ಲಭಿಸಿತು.
ಶನಿವಾರ ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್‌ಗೆ ದ.ಕೊರಿಯಾದ ಕಾಂಗ್ ಮಿನ್ ಹ್ಯುಕ್-ಸಿಯೊ ಸ್ಯುಯೆಂಗ್ ಜೋಡಿ ಸವಾಲು ಎದುರಾಗಲಿದೆ.
Breaking: ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್‌ಗೆ ಭಾರತ ತಂಡ ಪ್ರಕಟ
ಅಶ್ವಿನಿ-ತನೀಶಾ ಔಟ್
ಮಹಿಳಾ ಡಬಲ್ಸ್ ಕ್ವಾರ್ಟರ್‌ನಲ್ಲಿ ಅಶ್ವಿನಿ-ತನೀಶಾಗೆ ಜಪಾನ್‌ನ ರಿನ್ ಇವಾನಗ-ಕೀ ನಕಾನಿಶಿ ವಿರುದ್ಧ 15-21, 13-21ರಲ್ಲಿ ಆಘಾತಕಾರಿ ಸೋಲು ಎದುರಾಯಿತು. ಇದು ಜಪಾನ್ ಜೋಡಿ ವಿರುದ್ಧ ಅಶ್ವಿನಿ-ತನೀಶಾಗೆ 2ನೇ ಸೋಲು. ಕಳೆದ ತಿಂಗಲು ಸೆಯ್ಯದ್ ಮೋದಿ ಟೂರ್ನಿ ಫೈನಲ್‌ನಲ್ಲೂ ಸೋತಿದ್ದರು.
ಐ-ಲೀಗ್ 2ಗೆ ಸಜ್ಜಾದ ಬೆಂಗ್ಳೂರು ಯುನೈಟೆಟ್
ಬೆಂಗಳೂರು: ಮುಂಬರುವ ಐ-ಲೀಗ್ 2 ಫುಟ್ಬಾಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಎಫ್‌ಸಿ ಬೆಂಗಳೂರು ಯುನೈಟೆಡ್ ಉತ್ಸುಕವಾಗಿದ್ದು, ಐ-ಲೀಗ್‌ಗೆ ಅರ್ಹತೆ ಗಿಟ್ಟಿಸುವ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿಡಲಿದೆ. ಟೂರ್ನಿಯ ಸಿದ್ಧತೆಯ ಭಾಗವಾಗಿ ಶುಕ್ರವಾರ ನಗರದಲ್ಲಿ ತಂಡದ ಮಾಲಿಕ ಗೌರವ್ ಮಂಚಾಂಡ ಹಾಗೂ ನೂತನ ಮುಖ್ಯ ಕೋಚ್, ಫ್ರಾನ್ಸ್‌ನ ಫೆರ್ನಾಂಡೊ ಸ್ಯಾಂಟಿಯಾಗೊ ವೆರೆಲಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶಿವಂ ದುಬೆ ಮಿಂಚಿನ ಇನ್ನಿಂಗ್ಸ್, ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದ ಭಾರತ!
‘ಕಳೆದ ಋತುವಿನ ತಪ್ಪುಗಳಿಂದ ಪಾಠ ಕಲಿತಿದ್ದೇವೆ. ಈ ಬಾರಿ ಉತ್ತಮ ಪ್ರದರ್ಶನ ನೀಡಿ ಐ-ಲೀಗ್‌ಗೆ ಅರ್ಹತೆ ಪಡೆದುಕೊಳ್ಳುವುದು ನಮ್ಮ ಗುರಿ. ಅದನ್ನು ಸಾಧಿಸುವ ನಿರೀಕ್ಷೆಯಿದೆ’ ಎಂದು ಗೌರವ್ ಹೇಳಿದರು. ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡ ಜ.20ರಂದು ಬೆಂಗಳೂರಿನಲ್ಲಿ ಕೆಂಕ್ರೆ ಎಫ್‌ಸಿ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.
ಏಷ್ಯನ್ ಶೂಟಿಂಗ್: ಚಿನ್ನ, ಬೆಳ್ಳಿ ಗೆದ್ದ ಭಾರತೀಯರು
ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಭಾರತೀಯರ ಪಾರಮ್ಯ ಮುಂದುವರಿದಿದೆ. ಶುಕ್ರವಾರ ಪುರುಷರ 50 ಮೀ. 3 ಪೊಸಿಷನ್ ವಿಭಾಗದಲ್ಲಿ ಭಾರತದ ಅಖಿಲ್ ಶೆರಾನ್ ಚಿನ್ನ ಹಾಗೂ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಸದ್ಯ ಭಾರತಕ್ಕೆ 10 ಚಿನ್ನ, 8 ಬೆಳ್ಳಿ, 6 ಕಂಚು ಸೇರಿ ಒಟ್ಟು 24 ಪದಕಗಳು ಲಭಿಸಿದೆ. 25 ಮಿ. ರ್‍ಯಾಪಿಡ್ ಫೈರ್ ವಿಭಾಗದಲ್ಲಿ ಒಲಿಂಪಿಕ್ ಸ್ಥಾನಕ್ಕಾಗಿ ಇಬ್ಬರು ಭಾರತೀಯರಾದ ಆದರ್ಶ್ ಸಿಂಗ್ ಹಾಗೂ ವಿಜಯ್ ವೀರ್ ಸಿಧು ಪೈಪೋಟಿಯಲ್ಲಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಒಲಿಂಪಿಕ್ಸ್ ಟಿಕೆಟ್ ಸಿಗುವ ನಿರೀಕ್ಷೆಯಿದೆ.