ಎಬಿಡಿ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ; ತವರಿನಲ್ಲಿ ಆರ್'ಸಿಬಿಗಿದು ಎರಡನೇ ಜಯ

Royal Challengers Bangalore won by 6 Wicket
Highlights

ಬೆಂಗಳೂರು(ಏ.21): ಎಬಿ ಡಿವಿಲಿಯರ್ಸ್ ಸಿಡಿಬ್ಬರದ ಬ್ಯಾಟಿಂಗ್(90* 39 ಎ, 10ಬೌ,5ಸಿ) ನೆರವಿನಿಂದ ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಆರ್'ಸಿಬಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಬೆಂಗಳೂರು(ಏ.21): ಎಬಿ ಡಿವಿಲಿಯರ್ಸ್ ಸಿಡಿಬ್ಬರದ ಬ್ಯಾಟಿಂಗ್(90* 39 ಎ, 10ಬೌ,5ಸಿ) ನೆರವಿನಿಂದ ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಆರ್'ಸಿಬಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಶಭ್ ಪಂತ್ ಆಕರ್ಷಕ ಅರ್ಧಶತಕಗಳ ನೆರವಿನಿಂದ 174 ರನ್ ಕಲೆ ಹಾಕಿತ್ತು. ಸವಾಲಿನ ಗುರಿ ಬೆನ್ನತ್ತಿದ ಆರ್'ಸಿಬಿ ಮತ್ತೊಮ್ಮೆ ಆರಂಭಿಕ ಆಘಾತ ಎದುರಿಸಿತು. ಸರ್ಫರಾಜ್ ಖಾನ್ ಬದಲಿಗೆ ಸ್ಥಾನ ಪಡೆದಿದ್ದ ಮನನ್ ವೋಹ್ರಾ ಕೇವಲ 2 ರನ್ ಗಳಿಸಿ ಮ್ಯಾಕ್ಸ್'ವೆಲ್'ಗೆ ವಿಕೆಟ್ ಒಪ್ಪಿಸಿದರು. ಇನ್ನು ಡಿ ಕಾಕ್ ಇಲ್ಲದ ರನ್ ಕದಿಯಲು ಹೋಗಿ ರನೌಟ್'ಗೆ ಬಲಿಯಾದರು.

ಕೊಹ್ಲಿ-ಎಬಿಡಿ ಮಿಂಚಿನಾಟ: ತಂಡದ ಮೊತ್ತ 29 ರನ್'ಗಳಾಗುವಷ್ಟರಲ್ಲೇ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಈ ವೇಳೆ ಜತೆಯಾದ ಕೊಹ್ಲಿ ಹಾಗೂ ಎಬಿಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಿಂದಲೇ ಡೆಲ್ಲಿ ಬೌಲರ್'ಗಳ ಬೆವರಿಳಿಸಲು ಆರಂಭಿಸಿದ ಎಬಿಡಿ ಚೆಂಡನ್ನು ನಾನಾ ದಿಕ್ಕುಗಳಿಗೆ ಅಟ್ಟುವ ಮೂಲಕ ಚಿನ್ನಸ್ವಾಮಿ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದರು. ಒಂದು ಕಡೆ ಎಬಿಡಿ ಸ್ಫೋಟಕವಾಡುತ್ತಿದ್ದರೆ ಮತ್ತೊಂದೆಡೆ ಕೊಹ್ಲಿ ಉತ್ತಮ ಸಾಥ್ ನೀಡಿದರು. ಮೂರನೇ ವಿಕೆಟ್'ಗೆ ಈ ಜೋಡಿ 61 ರನ್'ಗಳ ಜತೆಯಾಟವಾಡಿತು. ಉತ್ತಮವಾಗಿ ಇನಿಂಗ್ಸ್ ಕಟ್ಟುತ್ತಿದ್ದ ಕೊಹ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಬೌಲ್ಟ್ ಹಿಡಿದ ಅದ್ಭುತ ಕ್ಯಾಚ್'ಗೆ ಪೆವಿಲಿಯನ್ ಸೇರಬೇಕಾಯಿತು. ಕೊಹ್ಲಿ ಪೆವಿಲಿಯನ್ ಸೇರುವ ಮುನ್ನ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನೊಂದಿಗೆ 30 ರನ್ ಬಾರಿಸಿದ್ದರು.

ಕೊನೆವರೆಗೂ ಅಬ್ಬರಿಸಿದ ಎಬಿಡಿ: ವಿರಾಟ್ ಔಟ್ ಆದ ಬಳಿಕ ಕೋರಿ ಆಂಡರ್'ಸನ್ ಜತೆ ಇನಿಂಗ್ಸ್ ಮುಂದುವರೆಸಿದ ಎಬಿಡಿ ಆ ಬಳಿಕ ಅರ್ಧಶತಕ ಪೂರೈಸಿದರು. ಕೋರಿ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಗೆ ಮನ್ದೀಪ್ ಅವರೊಂದಿಗೆ ಇನಿಂಗ್ಸ್ ಕಟ್ಟಿದ ಎಬಿಡಿ ಬೌಂಡರಿ ಬಾರಿಸುವುದರೊಂದಿಗೆ ಆರ್'ಸಿಬಿಗೆ ತವರಿನಲ್ಲಿ ಎರಡನೇ ಗೆಲುವು ತಂದುಕೊಟ್ಟರು. ಅಜೇಯ ಬ್ಯಾಟಿಂಗ್ ನಡೆಸಿದ ಎಬಿಡಿ 90* ಹಾಗೂ ಮನ್ದೀಪ್ 17* ತಂಡಕ್ಕೆ ಗೆಲುವಿನ ಸಿಂಚನ ನೀಡಿದರು.

ಇದಕ್ಕೂ ಮೊದಲು ಡೆಲ್ಲಿ 5 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತ್ತು.

loader