ಟಾಸ್ ಗೆದ್ದ ಆರ್'ಸಿಬಿ ಫೀಲ್ಡಿಂಗ್ ಆಯ್ಕೆ; ಡೆಲ್ಲಿಗೆ ಆರಂಭದಲ್ಲೇ ಶಾಕ್
ಡೆಲ್ಲಿ ಡೇರ್'ಡೆವಿಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್'ಸಿಬಿ ಬೌಲಿಂಗ್ ಆಯ್ದುಕೊಂಡಿದೆ. ಡೆಲ್ಲಿಗೆ ಆರಂಭದಲ್ಲೇ ಆಘಾತ ಎದುರಾಗಿದ್ದು ಮೂರನೇ ಓವರ್'ನ ಎರಡನೇ ಎಸೆತದಲ್ಲಿ ಗಂಭೀರ್ ವಿಕೆಟ್ ಕಳೆದುಕೊಂಡಿದೆ. ಉಮೇಶ್ ಯಾದವ್ ಎಸೆತದಲ್ಲಿ ಹುಕ್ ಮಾಡಲು ಯತ್ನಿಸಿದ ಗಂಭೀರ್ ಚಾಹಲ್'ಗೆ ಕ್ಯಾಚ್'ಯಿತ್ತು ಪೆವಿಲಿಯನ್ ಸೇರಿದರು.

ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು ಒತ್ತಡದಲ್ಲಿರುವ ಆರ್'ಸಿಬಿ ಗೆಲ್ಲಲೇ ಬೇಕಾದ ಒತ್ತಡದೊಂದಿಗೆ ಕಣಕ್ಕಿಳಿಯುತ್ತಿದೆ. ಇನ್ನು ಆರ್'ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸರ್ಫರಾಜ್ ಖಾನ್ ಬದಲಿಗೆ ಮನನ್ ವೋಹ್ರಾ ಅವರಿಗೆ ಸ್ಥಾನ ನೀಡಲಾಗಿದೆ.
ಇನ್ನು ಡೆಲ್ಲಿ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ಶಮಿ ಬದಲಿಗೆ ಹರ್ಷಲ್ ಪಟೇಲ್'ಗೆ ಅವಕಾಶ ಕಲ್ಪಿಸಲಾಗಿದೆ.