ಮುಂಬೈ(ಜು.19): ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯತ್ವ ಪಡೆದಿರುವ ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿದ ತಂಡದಲ್ಲಿ ಮತ್ತೆ ರೋಹಿತ್ ಶರ್ಮಾ ಅವಕಾಶ ವಂಚಿತರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಆರಂಭಿಕ 3 ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ನಡೆದಿದೆ. ಆಯ್ಕೆ ಬಳಿಕ ರೋಹಿತ್ ಶರ್ಮಾ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೂರ್ಯ ನಾಳೆಯೂ ಉದಯಿಸುತ್ತಾನೆ ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ.

 

 

ಟ್ವೀಟ್ ಮೂಲಕ ಕಠಿಣ ಪ್ರಯತ್ನದ ಮೂಲಕ ಮತ್ತೆ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದೇನೆ ಎಂಬ ಸೂಚನೆಯನ್ನೂ ನೀಡಿದ್ದಾರೆ. ಇಂದ ನನ್ನ ದಿನವಲ್ಲ. ಆದರೆ ನನ್ನ ದಿನ ಬಂದೇ ಬರುತ್ತೆ ಅನ್ನೋ ವಿಶ್ವಾಸವನ್ನೂ ರೋಹಿತ್ ಸೂಚ್ಯವಾಗಿ ತಿಳಿಸಿದ್ದಾರೆ.

ಏಕದಿನದಲ್ಲಿ 183 ಪಂದ್ಯವಾಡಿರುವ ರೋಹಿತ್ , ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 25 ಪಂದ್ಯ ಆಡಿದ್ದಾರೆ. ರೋಹಿತ್ ಶರ್ಮಾ 2007ರಲ್ಲಿ ಏಕದಿನ ಹಾಗೂ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ ರೋಹಿತ್ ಟೆಸ್ಟ್ ಕ್ರಿಕೆಟ್ ಕರಿಯರ್ ಆರಂಭಿಸಿದ್ದು 2013ರಲ್ಲಿ. ಟೆಸ್ಟ್ ಕ್ರಿಕೆಟ್ ಕರಿಯರ್‌ನಲ್ಲಿ ರೋಹಿತ್ ಹಲವು ಏರಿಳಿತ ಕಂಡಿದ್ದಾರೆ.