ಸರಣಿ ಗೆದ್ದರೂ ರೋಹಿತ್’ಗಿಲ್ಲ ಖುಷಿ..! ’ಹಿಟ್’ಮ್ಯಾನ್’ ಬೇಜಾರಾಗಿದ್ದೇಕೆ..?
Feb 4, 2019, 12:23 PM IST
ಹಾಲಿ ವಿಶ್ವಕಪ್ ರನ್ನರ್’ಅಪ್ ನ್ಯೂಜಿಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ 4-1 ಅಂತರದಲ್ಲಿ ಬಗ್ಗುಬಡಿದು ಸರಣಿ ಜಯಿಸಿದೆ. ಕೊನೆಯ ಎರಡು ಪಂದ್ಯಗಳ ಮಟ್ಟಿಗೆ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಏಕದಿನ ಸರಣಿಯನ್ನು ಜಯದ ಸಂಭ್ರಮದೊಂದಿಗೆ ಮುಕ್ತಾಯಗೊಳಿಸಿದ್ದಾರೆ.
ಸಾಮಾನ್ಯವಾಗಿ ಸರಣಿ ಗೆದ್ದರೆ ತಂಡದ ನಾಯಕ ಖುಷಿಯಾಗುತ್ತಾರೆ. ಆದರೆ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಜಯಿಸಿದರೂ ಖುಷಿಯಾಗಿರಲಿಲ್ಲ. ಏಕೆಂದರೆ, ರೋಹಿತ್ ಶತಕದ ನಾಗಾಲೋಟಕ್ಕೆ ಈ ಸರಣಿ ಬ್ರೇಕ್ ಹಾಕಿದೆ.