ಅಯ್ಯರ್, ಪಂತ್ ಆಕರ್ಷಕ ಅರ್ಧ ಶತಕ : ಆರ್'ಸಿಬಿಗೆ ಸವಾಲಿನ ಗುರಿ ನೀಡಿದ ಡೆಲ್ಲಿ

Rishabh Pant blistering innings take Delhi to 174
Highlights

ಬೆಂಗಳೂರು(ಏ.21): ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ರಿಶಬ್ ಪಂತ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಡೆಲ್ಲಿ ಡೇರ್'ಡೇವಿಲ್ಸ್ ತಂಡ 5 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿದ್ದು, ಆರ್'ಸಿಬಿಗೆ ಗೆಲ್ಲಲುಕ್ಕೆ 175 ರನ್ ಗುರಿ ನೀಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್'ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಡೆಲ್ಲಿ ತಂಡವನ್ನು ಬ್ಯಾಟಿಂಗ್'ಗೆ ಆಹ್ವಾನಿಸಿದರು. 3 ಓವರ್'ಗಳಾಗುವಷ್ಟರಲ್ಲಿ ಡೆಲ್ಲಿ ಆರಂಭಿಕ ಆಟಗಾರ ಜೆಸನ್ ರಾಯ್ ಹಾಗೂ ನಾಯಕ ಗೌತಮ್ ಗಂಭೀರ್ ಅವರ ವಿಕೆಟ್ ಕಳೆದುಕೊಂಡಿತು.

ಮೂರನೇ ವಿಕೇಟ್'ಗೆ ಸ್ಫೋಟಕ ಆಟವಾಡಿದ ಅಯ್ಯರ್ ಹಾಗೂ ರಿಷಬ್ ಪಂತ್ ಜೋಡಿ 13.5 ಓವರ್'ಗಳಲ್ಲಿ 98 ರನ್ ಪೇರಿಸಿದರು. ಅಯ್ಯರ್(52: 3 ಸಿಕ್ಸರ್, 4 ಬೌಂಡರಿ ) ಅರ್ಧ ಶತಕ ಗಳಿಸಿದ ನಂತರ ವಾಷಿಂಗ್ಟನ್ ಬೌಲಿಂಗ್'ನಲ್ಲಿ ಸಿರಾಜ್'ಗೆ ಕ್ಯಾಚಿತ್ತು ಔಟಾದರು. ಕೊನೆಯವರೆಗೂ ಆಟವಾಡಿದ ಪಂತ್ 48 ಎಸೆತಗಳಲ್ಲಿ  7 ಸಿಕ್ಸರ್, 6 ಬೌಂಡರಿಯೊಂದಿಗೆ 85 ರನ್ ಗಳಿಸಿ ಔಟಾದರು. ಅಂತಿಮವಾಗಿ ಡೆಲ್ಲಿ 20 ಓವರ್'ಗಳಲ್ಲಿ 174/5 ರನ್ ಪೇರಿಸಿತು. ಆರ್'ಸಿಬಿ ಪರ ಚಹಾಲ್ 22/2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್

ಡೆಲ್ಲಿ ಡೇರ್ ಡೇವಿಲ್ಸ್ 20 ಓವರ್'ಗಳಲ್ಲಿ 174/5

(ರಿಶಬ್ ಪಂಥ್ 85, ಅಯ್ಯರ್ 52)

ಆರ್'ಸಿಬಿ ವಿರುದ್ಧದ ಪಂದ್ಯ

(ವಿವರ ಅಪೂರ್ಣ)

loader