ಥಾಯ್ಲೆಂಡ್ ಓಪನ್: ಪ್ರಶಸ್ತಿ ಸುತ್ತಿನಲ್ಲಿ ಎಡವಿದ ಸಿಂಧು

First Published 15, Jul 2018, 10:07 PM IST
PV Sindhu falters in final hurdle again, loses to Nozomi Okuhara in Thailand Open
Highlights

ಈ ವರ್ಷ ಉತ್ತಮ ಪ್ರದರ್ಶನದ ಹೊರತಾಗಿಯೂ ಸಿಂಧು ಪ್ರಶಸ್ತಿ ಗೆಲ್ಲಲು ವಿಫಲವಾಗಿದ್ದಾರೆ. ಈ ಮೊದಲು ನಡೆದ ಮಲೇಷ್ಯಾ ಹಾಗೂ ಇಂಡೋನೇಷ್ಯಾ ಓಪನ್ ಟೂರ್ನಿಗಳಲ್ಲಿ ಸಿಂಧು ಕ್ರಮವಾಗಿ ಕ್ವಾರ್ಟರ್’ಫೈನಲ್ ಮತ್ತು ಸೆಮಿಫೈನಲ್ ಹಂತದಲ್ಲಿ ಎಡವಿದ್ದನ್ನು ಸ್ಮರಿಸಬಹುದು.

ಬ್ಯಾಂಕಾಕ್[ಜು.15]: ವರ್ಷದ ಚೊಚ್ಚಲ ಪ್ರಶಸ್ತಿ ಗೆಲ್ಲುವ ಸಿಂಧು ಕನಸು ಜಪಾನ್ ಆಟಗಾರ್ತಿ ನೊಜೊಮಿ ಓಕುಹಾರಾ ಎದುರು ಮುಗ್ಗರಿಸುವ ಮೂಲಕ ಮತ್ತೆ ಕನಸಾಗಿಯೇ ಉಳಿದಿದೆ. ಥಾಯ್ಲೆಂಡ್ ಓಪನ್’ನಲ್ಲಿ ಜಪಾನ್ ಆಟಗಾರ್ತಿ ಎದುರು ನೇರ ಗೇಮ್’ಗಳಲ್ಲಿ ಮುಗ್ಗರಿಸಿದ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ರನ್ನರ್’ಅಪ್’ಗೆ ತೃಪ್ತಿಪಟ್ಟುಕೊಂಡಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಸಿಂಧು 15-21, 18-21 ನೇರ ಗೇಮ್’ಗಳಲ್ಲಿ ಜಪಾನ್ ಆಟಗಾರ್ತಿ ಎದರು ಶರಣಾಗುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು. ಈ ಮೊದಲು ಸಿಂಧು ವಿಶ್ವ ಚಾಂಪಿಯನ್’ಶಿಪ್’ನಲ್ಲೂ ಜಪಾನ್ ಆಟಗಾರ್ತಿಗೆ ಶರಣಾಗಿದ್ದರು.

loader