ತಜೀಂದರ್ ಪಾಲ್ ತಂದೆ ಅಂತ್ಯ ಸಂಸ್ಕಾರ: ಕಂಬನಿ ಮಿಡಿದ ಪಂಜಾಬ್ ಸಿಎಂ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 11:13 AM IST
Punjab Minister condoles demise of shot putter father
Highlights

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಕರಮ್ ಸಿಂಗ್(54), ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಏಷ್ಯನ್ ಗೇಮ್ಸ್‌ನಿಂದ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದ ತಜೀಂದರ್ ಸಿಂಗ್, ಅಲ್ಲಿ ಗೆದ್ದ ಪದಕವನ್ನು ತಂದೆಗೆ ತೋರಿಸಬೇಕೆಂಬ ಕನಸು ಈಡೇರಲಿಲ್ಲ.

ಮೊಗಾ(ಪಂಜಾಬ್): ಏಷ್ಯನ್ ಗೇಮ್ಸ್ ಶಾಟ್‌ಪುಟ್'ನಲ್ಲಿ ಚಿನ್ನ ಜಯಿಸಿದ್ದ ಭಾರತದ ತಜೀಂದರ್ ಪಾಲ್ ಸಿಂಗ್ ತಂದೆ ಕರಮ್ ಸಿಂಗ್ ಅಂತ್ಯ ಸಂಸ್ಕಾರ ಗುರುವಾರ ಖೋಸಾ ಪಾಂಡೊ ಗ್ರಾಮದಲ್ಲಿ ಜರುಗಿತು.

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಕರಮ್ ಸಿಂಗ್(54), ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಏಷ್ಯನ್ ಗೇಮ್ಸ್‌ನಿಂದ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದ ತಜೀಂದರ್ ಸಿಂಗ್, ಅಲ್ಲಿ ಗೆದ್ದ ಪದಕವನ್ನು ತಂದೆಗೆ ತೋರಿಸಬೇಕೆಂಬ ಕನಸು ಈಡೇರಲಿಲ್ಲ. 

ಇದನ್ನು ಓದಿ: ಮಗನ ಚಿನ್ನದ ಪದಕ ನೋಡುವ ಮುನ್ನ ಕಣ್ಮುಚ್ಚಿದ ತಜೀಂದರ್ ತಂದೆ

ಅಂತ್ಯ ಸಂಸ್ಕಾರದ ಬಳಿಕ ದುಃಖದಲ್ಲಿಮುಳುಗಿದ ತಜೀಂದರ್ ಸಿಂಗ್, ತಂದೆಯೇ ನನಗೆ ಸ್ಫೂರ್ತಿಯಾಗಿದ್ದರು ಎಂದು ಹೇಳಿದ್ದಾರೆ. ತಜೀಂದರ್ ತಂದೆಯ ಸಾವಿವೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಂಬನಿ ಮಿಡಿದಿದ್ದಾರೆ.

loader