Pro Kabaddi League: ಪ್ರೊ ಕಬಡ್ಡಿ ಲೀಗ್ ಫೈನಲ್ ಪಂದ್ಯದ ವೇಳಾಪಟ್ಟಿ ಪ್ರಕಟ
* 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 2ನೇ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟ
* ಎರಡನೇ ಹಂತದಲ್ಲಿ ಪುಣೆಯಲ್ಲಿ ನವೆಂಬರ್ 9ರಿಂದ ಪಂದ್ಯಗಳು ಆರಂಭ
* ನವೆಂಬರ್ 18ರಿಂದ ನಡೆಯಲಿರುವ ಪಂದ್ಯಗಳಿಗೆ ಹೈದರಾಬಾದ್ ಆತಿಥ್ಯ
ಬೆಂಗಳೂರು(ಅ.12): 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 2ನೇ ಹಂತದ ಪಂದ್ಯಗಳ ವೇಳಾಪಟ್ಟಿಮಂಗಳವಾರ ಬಿಡುಗಡೆಯಾಗಿದ್ದು, ಪಂದ್ಯಗಳು ಪುಣೆ ಹಾಗೂ ಹೈದರಾಬಾದ್‌ನಲ್ಲಿ ನಡೆಯಲಿವೆ. ಪುಣೆಯಲ್ಲಿ ನವೆಂಬರ್ 9ರಿಂದ ಪಂದ್ಯಗಳು ಆರಂಭವಾಗಲಿದ್ದು, ಬಳಿಕ ನವೆಂಬರ್ 18ರಿಂದ ನಡೆಯಲಿರುವ ಪಂದ್ಯಗಳಿಗೆ ಹೈದರಾಬಾದ್ ಆತಿಥ್ಯ ವಹಿಸಲಿದೆ.
2ನೇ ಹಂತದಲ್ಲಿ 70 ಪಂದ್ಯಗಳು ನಡೆಯಲಿವೆ. ಲೀಗ್ ಮುಕ್ತಾಯದ ಬಳಿಕ ಪ್ಲೇ-ಆಫ್ ಶುರುವಾಗಲಿದ್ದು, ಡಿಸೆಂಬರ್ 13ಕ್ಕೆ ಎರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಡಿಸೆಂಬರ್ 15ಕ್ಕೆ, ಫೈನಲ್ ಡಿಸೆಂಬರ್ 17ಕ್ಕೆ ನಿಗದಿಯಾಗಿದೆ. ಪ್ಲೇ-ಆಫ್‌ಗೆ ಆತಿಥ್ಯ ವಹಿಸುವ ನಗರಗಳ ವಿವರ ಇನ್ನಷ್ಟೇ ಪ್ರಕಟಗೊಳ್ಳಬೇಕು.
ಪವನ್ ಶೆರಾವತ್ ಇಲ್ಲದೆ ಮಂಕಾದ ತಲೈವಾಸ್
ಬೆಂಗಳೂರು: ತಾರಾ ರೈಡರ್ ಪವನ್ ಶೆರಾವತ್ ಅನುಪಸ್ಥಿತಿಯಲ್ಲಿ ಮಂಕಾದಂತೆ ಕಂಡ ತಮಿಳ್ ತಲೈವಾಸ್ 9ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ ಸತತ 2ನೇ ಪಂದ್ಯದಲ್ಲೂ ಗೆಲುವು ಕಾಣದಾಯಿತು. ಮೊದಲ ಪಂದ್ಯ ಟೈ ಮಾಡಿಕೊಂಡಿದ್ದ ತಂಡ ಮಂಗಳವಾರ ಹರ್ಯಾಣ ಸ್ಟೀಲರ್ಸ್ ವಿರುದ್ಧ 22-27 ಅಂಕಗಳಿಂದ ಸೋಲನುಭವಿಸಿತು.
Pro Kabaddi League ಹರ್ಯಾಣ ಹಾಗೂ ತೆಲುಗು ಟೈಟಾನ್ಸ್‌ಗೆ ಗೆಲುವಿನ ಸಿಹಿ!
ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಹರ್ಯಾಣ ಮೊದಲಾರ್ಧದಲ್ಲಿ 15-10 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ತಲೈವಾಸ್ ಪ್ರತಿತೋಧ ತೋರಲು ಪ್ರಯತ್ನಿಸಿತಾದರೂ ಕೇವಲ 4 ರೈಡಿಂಗ್ ಅಂಕ ಗಳಿಸಿತು. ಪಂದ್ಯದುದ್ದಕ್ಕೂ ಆಲ್ರೌಂಡ್ ಪ್ರದರ್ಶನ ತೋರಿದ ಹರ್ಯಾಣ ಸತತ 2ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಯಿತು. ರೈಡರ್ ಮಂಜೀತ್ 8, ಡಿಫೆಂಡರ್ ಜಯ್‌ದೀಪ್ 5 ಅಂಕಗಳಿಸಿದರು. ತಲೈವಾಸ್‌ನ ಸಾಗರ್ 5 ಟ್ಯಾಕಲ್ ಅಂಕ ಸಂಪಾದಿಸಿದರು.
ಪಾಟ್ನಾಗೆ ಆಘಾತ
ಮಂಗಳವಾರದ 2ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ತೆಲುಗು ಟೈಟಾನ್ಸ್ 30-21 ಅಂಕಗಳಿಂದ ಜಯಗಳಿಸಿತು. ಮೋನು ಗೋಯತ್ 9, ಸಿದ್ದಾರ್ಥ್ 7 ರೈಡ್ ಅಂಕಗಳಿಸಿ ತಂಡವನ್ನು ಗೆಲ್ಲಿಸಿದರು. ಟೈಟಾನ್ಸ್ 3 ಪಂದ್ಯಗಳಲ್ಲಿ ಮೊದಲ ಜಯ ದಾಖಲಿಸಿದರೆ, ಪಾಟ್ನಾ 2ನೇ ಸೋಲು ಕಂಡಿತು.
ಇಂದಿನ ಪಂದ್ಯಗಳು
ಬೆಂಗಳೂರು ಬುಲ್ಸ್-ಬೆಂಗಾಲ್ ವಾರಿಯರ್ಸ್, ಸಂಜೆ 7.30ಕ್ಕೆ
ದಬಾಂಗ್ ಡೆಲ್ಲಿ-ಯು.ಪಿ.ಯೋಧಾ, ರಾತ್ರಿ 8.30ಕ್ಕೆ
ರ‍್ಯಾಂಕಿಂಗ್: 8ನೇ ಸ್ಥಾನಕ್ಕೇರಿದ ಲಕ್ಷ್ಯ ಸೆನ್
ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 8ನೇ ಸ್ಥಾನಕ್ಕೆ ತಲುಪಿದ್ದಾರೆ. ಮಂಗಳವಾರ ಬಿಡುಗಡೆಗೊಂಡ ನೂತನ ಪಟ್ಟಿಯಲ್ಲಿ ಅವರು 1 ಸ್ಥಾನ ಪ್ರಗತಿ ಸಾಧಿಸಿದ್ದಾರೆ. ಇದೇ ವೇಳೆ ಮಹಿಳಾ ರ‍್ಯಾಂಕಿಂಗ್‌ನಲ್ಲಿ 2 ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ತಾರಾ ಜೋಡಿ ಸಾತ್ವಿಕ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿಪುರುಷರ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿ ಮುಂದುವರಿದಿದ್ದು, ಅರ್ಜುನ್-ಧೃವ್ ಕಪಿಲಾ 2 ಸ್ಥಾನ ಜಿಗಿತ ಕಂಡು 21ನೇ ಸ್ಥಾನ ತಲುಪಿದ್ದಾರೆ.