ಪಂಚಕುಲ(ಡಿ.14): ಪುಣೇರಿ ಪಲ್ಟಾನ್ ವಿರುದ್ದದ ಪ್ರೊ ಕಬಡ್ಡಿ ಲೀಗ್ 111ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ 36-23 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆದರೆ ಇದುವರೆಗೆ ಕೇವಲ 5 ಗೆಲುವು ಸಾಧಿಸಿದ ಜೈಪುರ ಎ ಗಂಪಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: ಆಟಗಾರರ ಖರೀದಿಗೆ ತಂಡದಲ್ಲಿರುವ ಬಾಕಿ ಹಣವೆಷ್ಟು?

ಮೊದಲಾರ್ಧದಲ್ಲೇ ಪುಣೇರಿ ಪಲ್ಟಾನ್ ನೀರಸ ಪ್ರದರ್ಶನ ನೀಡಿತು. ಫಸ್ಟ್ ಹಾಫ್ ಅಂತ್ಯದಲ್ಲಿ 9-21 ಅಂಕಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿತು. ದ್ವಿತೀಯಾರ್ಧದಲ್ಲಿ ಹೋರಾಟ ನೀಡಿದರೂ ಪುಣೇರಿ ಮುನ್ನಡೆ ಸಾಧಿಸಲಿಲ್ಲ. ಹೀಗಾಗಿ ಜೈಪುರ ತಂಡ 36-23 ಅಂಕಗಳ ಗೆಲುವು ಸಾಧಿಸಿತು.

ಇದನ್ನೂ ಓದಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೈ ಹಿಡಿದ ಪರುಪಳ್ಳಿ ಕಶ್ಯಪ್!

ದ್ವಿತೀಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಹಾಗೂ ತಮಿಳ್ ತಲೈವಾಸ್ ಮುಖಾಮುಖಿಯಾಗಿತ್ತು. ರೋಚಕ ಹೋರಾಟದಲ್ಲಿ  ಬೆಂಗಾಲ್ ವಾರಿಯರ್ಸ್ 28-21 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. 

ಇದನ್ನೂ ಓದಿ: ತಂದೆಯಾಗುತ್ತಿದ್ದಾರಾ ಯುವರಾಜ್ ಸಿಂಗ್ - ಪತ್ನಿ ಹಜೆಲ್ ಹೇಳಿದ್ದೇನು?