ವೈಜಾಗ್(ಡಿ.11): ದಬಾಂಗ್ ದಿಲ್ಲಿ ವಿರುದ್ಧ ಪ್ರೋ ಕಬಡ್ಡಿ ಲೀಗ್‌ನ 106ನೇ ಪಂದ್ಯದಲ್ಲಿ ಯು ಮುಂಬಾ ಭರ್ಜರಿ ಗೆಲುವು ಸಾಧಿಸಿದೆ. ಆರಂಭದಿಂದಲೇ ಮೇಲುಗೈ ಸಾಧಿಸಿದ ಯು ಮುಂಬಾ 44-19 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.

ದಬಾಂಗ್ ದಿಲ್ಲಿ ಪೈಪೋಟಿ ನೀಡಲೇ ಇಲ್ಲ. ಅಂಕಗಳಿಸಲು ಪರದಾಡಿದ ದಿಲ್ಲಿ ತಂಡ ಮೊದಲಾರ್ಧದಲ್ಲಿ 11-19 ಅಂಕಗಳ ಹಿನ್ನಡೆ ಅನುಭವಿಸಿತು. ಸಾಧಾರಣ ಮುನ್ನಡೆಯಲ್ಲಿದ್ದ ಯು ಮುಂಬಾ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿತು. ಹೀಗಾಗಿ 44-19 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.