Asianet Suvarna News Asianet Suvarna News

ಪ್ರೊ ಕಬಡ್ಡಿ ಒಂದು ಝಲಕ್; ಹೀಗಿತ್ತು 5 ಆವೃತ್ತಿಯಲ್ಲಿನ ಕಬಡ್ಡಿ ಕಬಡ್ಡಿ

ಭಾರತದಲ್ಲಿ ಕ್ರಿಕೆಟ್ ನಂತರ ಅತಿಹೆಚ್ಚು ವೀಕ್ಷಕರನ್ನು ಸೆಳೆದ ಜನಪ್ರಿಯ ಕ್ರೀಡೆ ಎಂದರೆ ಅದು ಪ್ರೊ ಕಬಡ್ಡಿ. 2014ರಲ್ಲಿ ಆರಂಭವಾದ ಪ್ರೊ ಕಬಡ್ಡಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು. ಮೊದಲ ಆವೃತ್ತಿಯಲ್ಲಿ 435 ಮಿಲಿಯನ್ ಮಂದಿ ಕಬಡ್ಡಿ ವೀಕ್ಷಿಸಿದ್ದರು. 2017ರಲ್ಲಿ ಮತ್ತೆ 4 ತಂಡಗಳು ಸೇರ್ಪಡೆಗೊಂಡವು. ಇದೀಗ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

Pro Kabaddi 2018 This is how the game of Pro Kabaddi Shining
Author
Bengaluru, First Published Oct 6, 2018, 1:27 PM IST

ಬೆಂಗಳೂರು[ಅ.06]: ಬಹುನಿರೀಕ್ಷಿತ ಪ್ರೊ ಕಬಡ್ಡಿ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆಯಿಂದ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಇಂದು ಚೆನ್ನೈನಲ್ಲಿ ವಿದ್ಯುಕ್ತವಾಗಿ ಚಾಲನೆ ದೊರಕಲಿದೆ. ತಮಿಳ್ ತಲೈವಾಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಡಲಿವೆ. ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಪುಣೇರಿ ಪಲ್ಟಾನ್ ತಂಡಗಳು ಮುಖಾಮುಖಿಯಾಗಲಿವೆ.
ಭಾರತದಲ್ಲಿ ಕ್ರಿಕೆಟ್ ನಂತರ ಅತಿಹೆಚ್ಚು ವೀಕ್ಷಕರನ್ನು ಸೆಳೆದ ಜನಪ್ರಿಯ ಕ್ರೀಡೆ ಎಂದರೆ ಅದು ಪ್ರೊ ಕಬಡ್ಡಿ. 2014ರಲ್ಲಿ ಆರಂಭವಾದ ಪ್ರೊ ಕಬಡ್ಡಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು. ಮೊದಲ ಆವೃತ್ತಿಯಲ್ಲಿ 435 ಮಿಲಿಯನ್ ಮಂದಿ ಕಬಡ್ಡಿ ವೀಕ್ಷಿಸಿದ್ದರು. 2017ರಲ್ಲಿ ಮತ್ತೆ 4 ತಂಡಗಳು ಸೇರ್ಪಡೆಗೊಂಡವು. ಇದೀಗ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

ಮೊದಲ ಆವೃತ್ತಿ: 
2014ರಲ್ಲಿ ನಡೆದ ಮೊದಲ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ರಾಕೇಶ್ ಕುಮಾರ್ 12.80 ಲಕ್ಷ ರುಪಾಯಿಗೆ ಪಾಟ್ನಾ ಪೈರೇಟ್ಸ್ ತಂಡದ ಪಾಲಾಗುವ ಮೂಲಕ ಆವೃತ್ತಿಯ ದುಬಾರಿ ಆಟಗಾರರೆನಿಸಿದರು. ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಒಟ್ಟು 56 ಪಂದ್ಯಗಳು ಜರುಗಿದವು. ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಎರಡು ತಂಡಗಳೇ ಫೈನಲ್ ಪ್ರವೇಶಿಸಿದ್ದವು. ಜೈಪುರ ತಂಡವು ಮುಂಬೈ ತಂಡವನ್ನು 35-24 ಅಂಕಗಳಿಂದ ಮಣಿಸಿ ಚೊಚ್ಚಲ ಪ್ರೊ ಕಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಎರಡನೇ ಆವೃತ್ತಿ:
ಎರಡನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯು 2015ರ ಜುಲೈ 18ರಿಂದ ಆಗಸ್ಟ್ 23ರವರೆಗೆ ನಡೆಯಿತು. ಒಟ್ಟು 60 ಪಂದ್ಯಗಳು ಜರುಗಿದ್ದವು. ಬೆಂಗಳೂರು ಬುಲ್ಸ್ ತಂಡವನ್ನು 36-30 ಅಂಕಗಳಿಂದ ಮಣಿಸಿದ ಯು ಮುಂಬಾ ಮೊದಲ ಬಾರಿಗೆ ಪ್ರೊ ಕಬಡ್ಡಿ ಚಾಂಪಿಯನ್ ಪಟ್ಟ ಅಲಂಕರಿಸಿತು. ತೆಲುಗು ಟೈಟಾನ್ಸ್ ತಂಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮೂರನೇ ಆವೃತ್ತಿ:
2016ರಲ್ಲಿ ಎರಡು ಆವೃತ್ತಿಗಳಲ್ಲಿ ಪ್ರೊ ಕಬಡ್ಡಿ ಜರುಗಿದವು. 2016ರ ಜನವರಿಯಿಂದ ಫೆಬ್ರವರಿವರೆಗೆ ನಡೆದ ಟೂರ್ನಿಯಲ್ಲಿ ಫೈನಲ್’ನಲ್ಲಿ ಪಾಟ್ನಾ ಪೈರೇಟ್ಸ್ ತಂಡವು ಯು ಮುಂಬಾ ತಂಡವನ್ನು ಮೂರು ಅಂಕಗಳಿಂದ ಮಣಿಸಿ ರೋಚಕ ಜಯ ಸಾಧಿಸುವುದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.

ನಾಲ್ಕನೇ ಆವೃತ್ತಿ: 
ಜೂನ್ 25ರಿಂದ ಜುಲೈ 31ರವರೆಗೆ ಜರುಗಿದ ನಾಲ್ಕನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹಾಲಿ 8 ತಂಡಗಳೇ ಭಾಗವಹಿಸಿದ್ದವು. ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿ ಪಾಟ್ನಾ ಪೈರೇಟ್ಸ್ ತಂಡವು ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೇ ಆವೃತ್ತಿಯಲ್ಲಿ ವುಮೆನ್ಸ್ ಕಬಡ್ಡಿ ಚಾಲೆಂಜ್ ಟೂರ್ನಿಯನ್ನು ಪರಿಚಯಿಸಲಾಯಿತು. 

ಐದನೇ ಆವೃತ್ತಿ:
ಐದನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹೊಸ 4 ತಂಡಗಳ ಸೇರ್ಪಡೆಯೊಂದಿಗೆ ಒಟ್ಟು 12 ತಂಡಗಳು ಮೊದಲ ಬಾರಿಗೆ ಕಣಕ್ಕಿಳಿದಿದ್ದವು. ಈ ಮೊದಲಿದ್ದ ಬೆಂಗಳೂರು ಬುಲ್ಸ್, ಯು ಮುಂಬಾ, ತೆಲುಗು ಟೈಟಾನ್ಸ್, ಪಾಟ್ನಾ ಪೈರೇಟ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಪುಣೇರಿ ಪಲ್ಟಾನ್ ಜತೆಗೆ ಹೊಸದಾಗಿ ಹರಿಯಾಣ ಸ್ಟೀಲರ್ಸ್, ತಮಿಳ್ ತಲೈವಾಸ್, ಯುಪಿ ಯೋಧಾ ಹಾಗೂ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡಗಳು ಟೂರ್ನಿಗೆ ಕಾಲಿಟ್ಟವು.
ನಿತಿನ್ ತೋಮರ್ 93 ಲಕ್ಷ ರುಪಾಯಿಗೆ ಯುಪಿ ಯೋಧಾ ತಂಡದ ಪಾಲಾಗುವ ಮೂಲಕ ಹರಾಜಿನಲ್ಲಿ ಹೊಸ ಇತಿಹಾಸ ಬರೆದಿದ್ದರು. 13 ವಾರಗಳ ಕಾಲ 11 ರಾಜ್ಯಗಳಲ್ಲಿ ಒಟ್ಟು 138 ಪಂದ್ಯಗಳು ಜರುಗಿದವು. ಪ್ರದೀಪ್ ನರ್ವಾಲ್ ಆಕರ್ಷಕ್ ರೈಡಿಂಗ್ ನೆರವಿನಿಂದ ಪಾಟ್ನಾ ಪೈರೇಟ್ಸ್ ತಂಡವು 55-38 ಅಂಕಗಳಿಂದ ಗುಜರಾತ್ ತಂಡವನ್ನು ಮಣಿಸಿ ಸತತ ಮೂರನೇ ಬಾರಿಗೆ ಪ್ರೊ ಕಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಆರನೇ ಆವೃತ್ತಿ:...? 

Follow Us:
Download App:
  • android
  • ios