Asianet Suvarna News Asianet Suvarna News

ಪ್ರೊ ಕಬಡ್ಡಿ 2018: ಯು ಮುಂಬಾ, ತೆಲುಗು ಟೈಟಾನ್ಸ್‌ಗೆ ಗೆಲುವು!

ಪ್ರೊ ಕಬಡ್ಡಿ ಟೂರ್ನಿಯ ಪುಣೇರಿ ಪಲ್ಟಾನ್ - ತೆಲುಗು ಟೈಟಾನ್ಸ್ ಹಾಗೂ ಯು ಮುಂಬಾ-ಯುಪಿ ಯೋಧ ನಡುವಿನ ಪಂದ್ಯ ರೋಚಕ ಘಟ್ಟ ತಲುಪಿತು. ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Pro Kabaddi 2018 Telugu Titans and U Mumba registered win
Author
Bengaluru, First Published Nov 13, 2018, 10:21 PM IST

ಮುಂಬೈ(ನ.13): ಪುಣೇರಿ ಪಲ್ಟಾನ್ ವಿರುದ್ಧ ಪ್ರೊ ಕಬ್ಡಡಿ 60ನೇ ಲೀಗ್ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 28-15 ಅಂಕಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದೆ. ಮೊದಲಾರ್ಧದಲ್ಲೇ ಪುಣೆ ತಂಡ ಹಿನ್ನಡೆ ಅನುಭವಿಸಿತು. ಫಸ್ಟ್ ಹಾಫ್ ಅಂತ್ಯದಲ್ಲಿ ಪುಣೇರಿ 11-17 ಅಂಕಗಳಿಸಿತು. 

ದ್ವಿತೀಯಾರ್ಧದಲ್ಲೂ ಪುಣೇರಿ ಪಲ್ಟಾನ್ ಮುನ್ನಡೆ ಸಾಧಿಸಲಿಲ್ಲ. ಆದರೆ ಅಂತಿಮ ಹಂತದಲ್ಲಿ ಕಠಿಣ ಹೋರಾಟ ನೀಡಿತು. ಉತ್ತಮ ಪ್ರದರ್ಶನ ನೀಡಿದ ತೆಲುಗು ಟೈಟಾನ್ಸ್ 28-25 ಅಂಕಗಳ ಅಂತರಗಲ್ಲಿ ಗೆಲುವಿ ನಗೆ ಬೀರಿತು.

ಎರಡನೇ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಯು ಮುಂಬಾ 41-24 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಮೊದಲಾರ್ಧದಲ್ಲೇ ಮೇಲುಗೈ ಸಾಧಿಸಿದ ಯು ಮುಂಬಾ ಅಂಕಗಳ ಅಂತರ ಹೆಚ್ಚಿಸಿತು. ಹೀಗಾಗಿ ಭರ್ಜರಿ ಗೆಲುವು ಸಾಧಿಸಿತು.

Follow Us:
Download App:
  • android
  • ios