ಬಿಹಾರ(ಅ.31): ಆರನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪುಣೇರಿ ಪಲ್ಟಾನ್ 6ನೇ ಗೆಲುವು ಸಾಧಿಸಿದೆ. ಸಂದೀಪ್ ನರ್ವಾಲ್ ಹಾಗೂ ರಿಂಕೂ ನರ್ವಾಲ್ ಅದ್ಬುತ ಪ್ರದರ್ಶನದ ಮೂಲಕ ಪುಣೇರಿ ಪಲ್ಟಾನ್ ಗೆಲುವಿನ ನಗೆ ಬೀರಿದೆ.

 

 

ದೆಹಲಿ ಪರ ನವೀನ್ ಕುಮಾರ್ ಹೋರಾಟ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ. ನವೀನ್ ಕುಮಾರ್ 6 ರೈಡ್ ಅಂಕ ಗಳಿಸಿದರು. ಆದರೆ ನವೀನ್‌ಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ ಮೊದಲಾರ್ಧದ ಅಂತ್ಯದಲ್ಲಿ ಪುಣೇರಿ ಪಲ್ಟಾನ್ 22-15 ಅಂಕಗಳ ಮುನ್ನಡೆ ಪಡೆದುಕೊಂಡಿತು.

ನಿಧಾನಗತಿಯಲ್ಲಿ ಸಾಗಿದ ಪಂದ್ಯದಲ್ಲಿ ಉಭಯ ತಂಡಗಳು ಡು ಆರ್ ಡೈ ರೈಡ್ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಫಲಿತಾಂಶದಲ್ಲಿ ಹೆಚ್ಚಿನ ಬದಲಾವಣಗಳಾಗಲಿಲ್ಲ. ಸೆಕಂಡ್ ಹಾಫ್ ಅಂತ್ಯದ ವೇಳೆ ಪುಣೇರಿ ಪಲ್ಟಾನ್ 31-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.