ಪ್ರೊ ಕಬಡ್ಡಿ 2018: ಜೈಪುರ-ಡೆಲ್ಲಿ ಹಣಾಹಣಿ ರೋಚಕ ಟೈ

ಜೈಪುರದ ತಾರಾ ರೈಡರ್ ದೀಪಕ್ ಹೂಡಾ 8 ರೈಡಿಂಗ್ ಅಂಕ, ಡಿಫೆಂಡರ್ ಸಂದೀಪ್ 6 ಅಂಕ, ಆಲ್ರೌಂಡ್ ಪ್ರದರ್ಶನ ತೋರಿದ ಕೆ.ಸೆಲ್ವಮಣಿ ಒಟ್ಟು 11 ಅಂಕಗಳಿಸಿ ಗಮನ ಸೆಳೆದರು. ಡೆಲ್ಲಿ ಪರ ಚಂದ್ರನ್ ರಂಜಿತ್ 11 ಮತ್ತು ಪವನ್ ಕಾಡಿಯನ್ 9 ಅಂಕ ಗಳಿಸಿದರು.

Pro Kabaddi 2018 Jaipur Pink Panthers Vs Dabang Delhi match ends in a tie

ಪಂಚಕುಲಾ(ಡಿ.21): ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಜೈಪುರ ಪಿಂಕ್ ಪ್ಯಾಂಥರ್ಸ್‌, ತವರಿನ ಚರಣದ ಕೊನೆ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ 37-37 ಅಂಕಗಳಿಂದ ಟೈ ಸಾಧಿಸಿದೆ. ಲೀಗ್‌ನಲ್ಲಿ ಇದು 13ನೇ ಟೈ ಆಗಿದೆ.

ಇಲ್ಲಿನ ತೌ ಲಾಲ್‌ದೇವಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ನಡೆದ ರೋಚಕ ಹೋರಾಟದಲ್ಲಿ ಎರಡೂ ತಂಡಗಳು ಸಮಬಲದ ಕಾದಾಟ ನಡೆಸಿದವು. ಜೈಪುರದ ತಾರಾ ರೈಡರ್ ದೀಪಕ್ ಹೂಡಾ 8 ರೈಡಿಂಗ್ ಅಂಕ, ಡಿಫೆಂಡರ್ ಸಂದೀಪ್ 6 ಅಂಕ, ಆಲ್ರೌಂಡ್ ಪ್ರದರ್ಶನ ತೋರಿದ ಕೆ.ಸೆಲ್ವಮಣಿ ಒಟ್ಟು 11 ಅಂಕಗಳಿಸಿ ಗಮನ ಸೆಳೆದರು. ಡೆಲ್ಲಿ ಪರ ಚಂದ್ರನ್ ರಂಜಿತ್ 11 ಮತ್ತು ಪವನ್ ಕಾಡಿಯನ್ 9 ಅಂಕ ಗಳಿಸಿದರು.

ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಡೆಲ್ಲಿ, ಪಂದ್ಯದ 4ನೇ ನಿಮಿಷದಲ್ಲಿ 5-0 ಮುನ್ನಡೆ ಹೊಂದಿತು. ಆದರೆ 5ನೇ ನಿಮಿಷದಲ್ಲಿ ಸೂಪರ್ ಟ್ಯಾಕಲ್ ಮಾಡಿದ ಜೈಪುರ ಖಾತೆ ತೆರೆಯಿತು. 8ನೇ ನಿಮಿಷದಲ್ಲಿ ಉಭಯ ತಂಡಗಳು 6-6 ರಿಂದ ಸಮಬಲ ಸಾಧಿಸಿದವು. 11ನೇ ನಿಮಿಷದಲ್ಲಿ ಜೈಪುರ ತಂಡವನ್ನು ಆಲೌಟ್ ಮಾಡಿದ ಡೆಲ್ಲಿ, 11-07ರ ಮುನ್ನಡೆ ಪಡೆಯಿತು. 13ನೇ ನಿಮಿಷದಲ್ಲಿ ಸೆಲ್ವಮಣಿ ಸೂಪರ್ ರೈಡ್‌ನಿಂದ ಜೈಪುರದ ಸೆಲ್ವಮಣಿ ಅಂತರ ತಗ್ಗಿಸಿಕೊಂಡಿತು. ಮೊದಲಾರ್ಧದ ಮುಕ್ತಾಯಕ್ಕೆ ಡೆಲ್ಲಿ 18-17ರಿಂದ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದ ಆರಂಭಿಕ ನಿಮಿಷದಲ್ಲೇ ಸೂಪರ್ ರೈಡ್ ಮಾಡಿದ ಪವನ್ ಕಾಡಿಯನ್ ಡೆಲ್ಲಿಗೆ 21-18ರ ಮುನ್ನಡೆ ಒದಗಿಸಿದರು. 24ನೇ ನಿಮಿಷದಲ್ಲಿ ರೈಡಿಂಗ್‌ಗೆ ಬಂದ ಸೆಲ್ವಮಣಿ 4 ಅಂಕಗಳಿಸಿ ಜೈಪುರಕ್ಕೆ ಬಲ ತುಂಬಿದರು. 38ನೇ ನಿಮಿಷದಲ್ಲಿ ಡೆಲ್ಲಿ ತಂಡವನ್ನು ಆಲೌಟ್ ಮಾಡಿದ ಜೈಪುರ ಅಂತರವನ್ನು 1ಕ್ಕೆ ಇಳಿಸಿಕೊಂಡಿತು. ಅಂತಿಮ ನಿಮಿಷದಲ್ಲಿ ರೈಡಿಂಗ್‌ಗೆ ತೆರಳಿದ ದೀಪಕ್ ಹೂಡಾ 1 ಅಂಕಗಳಿಸಿ ಪಂದ್ಯ ಟೈ ಮಾಡಿದರು.

ಟರ್ನಿಂಗ್ ಪಾಯಿಂಟ್: ಪಂದ್ಯ ಕೊನೆ ರೈಡಿಂಗ್'ನಲ್ಲಿ ಜೈಪುರ ದೀಪಕ್ ಹೂಡಾಗೆ ಅಂಕ ಬಿಟ್ಟುಕೊಟ್ಟ ಡೆಲ್ಲಿಯಿಂದಾಗಿ ಪಂದ್ಯ ಟೈಗೊಂಡಿತು.

ಶ್ರೇಷ್ಠ ರೈಡರ್: ಸೆಲ್ವಮಣಿ( 11 ಅಂಕ )
ಶ್ರೇಷ್ಠ ಡಿಫೆಂಡರ್: ಸಂದೀಪ್ (06 ಅಂಕ)

Latest Videos
Follow Us:
Download App:
  • android
  • ios