ಬಿಹಾರ್(ಅ.30): ಸಚಿನ್ ಅದ್ಬುತ ರೈಡ್ ಹಾಗೂ ರುತುರಾಜ್ ಕೊರವಿ ಟ್ಯಾಕಲ್‌ನಿಂದ ಬಲಿಷ್ಠ ಪುಣೇರಿ ಪಲ್ಟಾನ್ ವಿರುದ್ಧ ಗುಜರಾತ್ ಫಾರ್ಚುನ್‌ಜೈಂಟ್ಸ್ 37-27 ಅಂಕಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದೆ. 

 

 

ಮೊದಲಾರ್ಧದ ಆರಂಭದಲ್ಲಿ ಉಭಯ ತಂಡಗಳು ಎಚ್ಚರಿಕೆ ಆಟ ಪ್ರದರ್ಶಿಸಿತು. ಆರಂಭದಲ್ಲಿ 4-2 ಅಂತರದ ಮುನ್ನಡೆ ಸಾಧಿಸಿದ್ದ ಪುಣೇರಿ ಹಾಫ್ ಟೈಮ್ ಆಟದಲ್ಲಿ 12-16 ಅಂಕಗಳ ಹಿನ್ನಡೆ ಅನುಭವಿಸಿತು.

ರೈಡಿಂಗ್‌ನಲ್ಲಿ ಗುಜರಾತ್ ತಂಡದ ಸಚಿನ್ 10 ಅಂಕ ಪಡೆದರೆ, ಟ್ಯಾಕಲ್‌ನಲ್ಲಿ ರುತುರಾಜ್ 4 ಅಂಕಗಳಿಸಿದರು. ಹೀಗಾಗಿ ದ್ವಿತೀಯಾರ್ಧದಲ್ಲೂ ಗುಜರಾತ್ ಮೇಲುಗೈ ಸಾಧಿಸಿತು. ಅಂತಿಮ ಹಂತದಲ್ಲಿ 37-27 ಅಂಕಗಳ ಅಂತರದಲ್ಲಿ ಗುಜರಾತ್ ಗೆಲುವು ಸಾಧಿಸಿತು.