ಸ್ಟೀಲರ್ಸ್’ಗೆ ಸೋಲುಣಿಸಿದ ದಬಾಂಗ್ ಡೆಲ್ಲಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 9:44 PM IST
Pro Kabaddi 2018 Delhi Win Thriller
Highlights

ಚಂದ್ರನ್ ರಂಜಿತ್ ರೈಡಿಂಗ್’ನಲ್ಲಿ ಡೆಲ್ಲಿಗೆ ಮೊದಲ ಅಂಕ ತಂದಿತ್ತರು. ಬಳಿಕ ಹರಿಯಾಣ ಸ್ಟೀಲರ್ಸ್ ಪರ ನವೀನ್ ಅಂಕದ ಖಾತೆ ತೆರೆದರು. ಮೊದಲಾರ್ಧದ 5ನೇ ನಿಮಿಷದಲ್ಲಿ ಉಭಯ ತಂಡಗಳು 5-5 ಅಂಕಗಳ ಸಮಬಲ ಸಾಧಿಸಿದ್ದವು.

ಗ್ರೇಟರ್ ನೋಯ್ಡಾ[ನ.08]: ದಬಾಂಗ್ ಡೆಲ್ಲಿ-ಹರಿಯಾಣ ಸ್ಟೀಲರ್ಸ್ ನಡುವಿನ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ದಬಾಂಗ್ ಡೆಲ್ಲಿ 39-33 ಅಂಕಗಳಿಂದ ಕೊನೆಗೂ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಡೆಲ್ಲಿ ನಾಲ್ಕನೇ ಸ್ಥಾನದಲ್ಲೇ ಮುಂದುವರೆದಿದೆ.

ಚಂದ್ರನ್ ರಂಜಿತ್ ರೈಡಿಂಗ್’ನಲ್ಲಿ ಡೆಲ್ಲಿಗೆ ಮೊದಲ ಅಂಕ ತಂದಿತ್ತರು. ಬಳಿಕ ಹರಿಯಾಣ ಸ್ಟೀಲರ್ಸ್ ಪರ ನವೀನ್ ಅಂಕದ ಖಾತೆ ತೆರೆದರು. ಮೊದಲಾರ್ಧದ 5ನೇ ನಿಮಿಷದಲ್ಲಿ ಉಭಯ ತಂಡಗಳು 5-5 ಅಂಕಗಳ ಸಮಬಲ ಸಾಧಿಸಿದ್ದವು. ಆನಂತರ ಡೆಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. 16ನೇ ನಿಮಿಷದ ವೇಳೆಗೆ ಡೆಲ್ಲಿ 14-13 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಪಂದ್ಯ ಮುಕ್ತಾಯಕ್ಕೆ ಕೊನೆಯ 2 ನಿಮಿಷಗಳಿದ್ದಾಗ ಮೊನು ಗೋಯೆತ್ ಯಶಸ್ವಿ ರೈಡಿಂಗ್ ನಡೆಸುವ ಮೂಲಕ ಹರಿಯಾಣ ತಂಡ ಮೊದಲ ಬಾರಿಗೆ ಮುನ್ನಡೆ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಹರ್ಯಾಣ ಮೊದಲಾರ್ಧ ಮುಕ್ತಾಯದ ವೇಳೆಗೆ 19-15 ಅಂಕಗಳ ಮುನ್ನಡೆ ಸಾಧಿಸಿತು. 

ಮೊದಲಾರ್ಧದ ಹಿನ್ನಡೆ ಮೆಟ್ಟಿನಿಲ್ಲಲು ದ್ವಿತಿಯಾರ್ಧದಲ್ಲಿ ಡೆಲ್ಲಿ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಸ್ಟಾರ್ ರೈಡರ್ ಮಿರಾಜ್ ಶೇಕ್, ನವೀನ್ ಕುಮಾರ್ ಆಕರ್ಷಕ ಪ್ರದರ್ಶನ ತೋರುವ ಮೂಲಕ ಮುನ್ನಡೆ ಸಾಧಿಸುವಲ್ಲಿ ಡೆಲ್ಲಿ ಯಶಸ್ವಿಯಾಯಿತು. ದ್ವಿತಿಯಾರ್ಧದ ಮೂರನೇ ನಿಮಿಷದಲ್ಲಿ ಸ್ಟೀಲರ್ಸ್ ಆಲೌಟ್ ಮಾಡಿದ ಡೆಲ್ಲಿ 24-20 ಅಂಕಗಳ ಮುನ್ನಡೆ ಸಾಧಿಸಿತು. ಆ ಬಳಿಕ ನಿರಂತರ ಅಂಕ ಹೆಚ್ಚಿಸಿಕೊಳ್ಳುತ್ತಾ ಸಾಗಿದ ಡೆಲ್ಲಿ 6 ಅಂಕಗಳ ರೋಚಕ ಗೆಲುವು ಸಾಧಿಸಿತು.

ಹರಿಯಾಣ ಪರ ಮೋನು ಗೋಯೆತ್ ರೈಡಿಂಗ್’ನಲ್ಲಿ 11 ಅಂಕ ಸಂಪಾದಿಸಿದರೇ, ಡೆಲ್ಲಿ ಪರ ನವೀನ್ ಕುಮಾರ್ 9 ಅಂಕ ಪಡೆದರು. ಡಿಫೆಂಡಿಂಗ್’ನಲ್ಲಿ ರವೀಂದ್ರ ಪೆಹಾಲ್ 6 ಅಂಕ ಕಲೆಹಾಕಿದರು.

loader