ಪ್ರೊ ಕಬಡ್ಡಿ: ಬೆಂಗಾಲ್‌ಗೆ ತವರಲ್ಲಿ ಜಯದ ಆರಂಭ

ಮೊದಲಾರ್ಧದ ಮುಕ್ತಾಯಕ್ಕೆ ಬೆಂಗಾಲ್‌ ಹಾಗೂ ತಲೈವಾಸ್‌ 15-15ರಲ್ಲಿ ಸಮಬಲ ಸಾಧಿಸಿದವು. ಆದರೆ ದ್ವಿತೀಯಾರ್ಧದಲ್ಲಿ ಬೆಂಗಾಲ್‌ ಮೇಲುಗೈ ಸಾಧಿಸಿ, 3 ಅಂಕಗಳಲ್ಲಿ ಪಂದ್ಯ ತನ್ನದಾಗಿಸಿಕೊಂಡಿತು.

Pro Kabaddi 2018 Bengal Warriors make a winning start in home leg

ಕೋಲ್ಕತಾ[ಡಿ.22]: ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ಗೇರುವ ಗುರಿ ಹೊಂದಿರುವ ಬೆಂಗಾಲ್‌ ವಾರಿಯರ್ಸ್, ತವರು ಚರಣದಲ್ಲಿ ಗೆಲುವಿನ ಆರಂಭ ಪಡೆದಿದೆ. 

ಇಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ 27-24 ಅಂಕಗಳಲ್ಲಿ ಗೆಲುವು ಸಾಧಿಸಿದ ಬೆಂಗಾಲ್‌, 17 ಪಂದ್ಯಗಳಲ್ಲಿ 9ನೇ ಜಯ ಸಾಧಿಸಿದ್ದು ತನ್ನ ಒಟ್ಟು ಅಂಕಗಳನ್ನು 53ಕ್ಕೇರಿಸಿಕೊಂಡಿದೆ. ಇದರೊಂದಿಗೆ 2ನೇ ಸ್ಥಾನದಲ್ಲಿರುವ ಪಾಟ್ನಾಗಿಂತ ಕೇವಲ 2 ಅಂಕ ಹಿಂದಿದ್ದು, ಪ್ಲೇ-ಆಫ್‌ಗೇರುವ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿದೆ. 

ಪಾಟ್ನಾ ಈಗಾಗಲೇ 20 ಪಂದ್ಯಗಳನ್ನು ಆಡಿದ್ದು, ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಬೆಂಗಾಲ್‌ಗೆ ಇನ್ನೂ 5 ಪಂದ್ಯ ಬಾಕಿ ಇದೆ. ಮೊದಲಾರ್ಧದ ಮುಕ್ತಾಯಕ್ಕೆ ಬೆಂಗಾಲ್‌ ಹಾಗೂ ತಲೈವಾಸ್‌ 15-15ರಲ್ಲಿ ಸಮಬಲ ಸಾಧಿಸಿದವು. ಆದರೆ ದ್ವಿತೀಯಾರ್ಧದಲ್ಲಿ ಬೆಂಗಾಲ್‌ ಮೇಲುಗೈ ಸಾಧಿಸಿ, 3 ಅಂಕಗಳಲ್ಲಿ ಪಂದ್ಯ ತನ್ನದಾಗಿಸಿಕೊಂಡಿತು.

ಟರ್ನಿಂಗ್‌ ಪಾಯಿಂಟ್‌: ದ್ವಿತೀಯಾರ್ಧದಲ್ಲೂ ಒಂದಕ್ಕಿಂತ ಹೆಚ್ಚು ಬಾರಿ ಆಲೌಟ್‌ ಆಗುವುದರಿಂದ ತಪ್ಪಿಸಿಕೊಂಡಿದ್ದೇ, ಬೆಂಗಾಲ್‌ ಸೋಲಿನಿಂದ ಪಾರಾಗಲು ಕಾರಣ.

ಶ್ರೇಷ್ಠ ರೈಡರ್‌: ಜಾನ್‌ ಕುನ್‌ ಲೀ (ಬೆಂಗಾಲ್‌, 10 ಅಂಕ)
ಶ್ರೇಷ್ಠ ಡಿಫೆಂಡರ್‌: ರಣ್‌ ಸಿಂಗ್‌ (ಬೆಂಗಾಲ್‌, 04 ಅಂಕ)

500 ಪಂದ್ಯ ಪೂರೈಕೆ!
ಬೆಂಗಾಲ್‌-ತಲೈವಾಸ್‌ ಪಂದ್ಯ ಪ್ರೊ ಕಬಡ್ಡಿಯ 500ನೇ ಪಂದ್ಯ. 2014ರ ಜುಲೈನಲ್ಲಿ ಆರಂಭಗೊಂಡ ಟೂರ್ನಿ, ಸದ್ಯ 6ನೇ ಆವೃತ್ತಿಯನ್ನು ಕಾಣುತ್ತಿದೆ.

ವರದಿ: ಗಣೇಶ್‌ ಪ್ರಸಾದ್‌ ಕುಂಬ್ಳೆ

Latest Videos
Follow Us:
Download App:
  • android
  • ios