ತಂದೆಯ ಕರ್ತವ್ಯ ನಿಭಾಯಿಸಿದ ಧೋನಿ; ವೖರಲ್ ಆದ ಆ ಕ್ಷಣ
ತಂಡವನ್ನು ಅಂಕಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನಕ್ಕೇರಿಸುವ ಮೂಲಕ ನಾಯಕನ ಕರ್ತವ್ಯ ಪೂರ್ಣಗೊಳಿಸಿದ ಬಳಿಕ ಸಿಎಸ್‌ಕೆ ತಂಡದ ನಾಯಕ ಎಂ.ಎಸ್.ಧೋನಿ, ತಂದೆಯ ಕರ್ತವ್ಯಕ್ಕೆ ಹಿಂದಿರುಗಿದ್ದಾರೆ. ಮಗಳು ಝೀವಾ ತಲೆ ಒಣಗಿಸುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೖರಲ್ ಆಗಿದೆ
ಬೆಂಗಳೂರು[ಏ.27]: ತಂಡವನ್ನು ಅಂಕಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನಕ್ಕೇರಿಸುವ ಮೂಲಕ ನಾಯಕನ ಕರ್ತವ್ಯ ಪೂರ್ಣಗೊಳಿಸಿದ ಬಳಿಕ ಸಿಎಸ್‌ಕೆ ತಂಡದ ನಾಯಕ ಎಂ.ಎಸ್.ಧೋನಿ, ತಂದೆಯ ಕರ್ತವ್ಯಕ್ಕೆ ಹಿಂದಿರುಗಿದ್ದಾರೆ.
ಬುಧವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ 34 ಎಸೆತಗಳಲ್ಲಿ 70 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಧೋನಿ, ತಮ್ಮ ಮಗಳು ಝೀವಾಳ ಕೂದಲು ಒಣಗಿಸುತ್ತಿರುವ ವಿಡಿಯೋವನ್ನು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.
‘ಪಂದ್ಯ ಗೆದ್ದು, ಒಳ್ಳೆಯ ನಿದ್ದೆ ಮಾಡಿ ಆಯಿತು. ಇದೀಗ ಮತ್ತೆ ತಂದೆಯ ಕರ್ತವ್ಯಕ್ಕೆ ಹಾಜರ್’ ಎಂದು ಧೋನಿ ಅಡಿಬರಹ ಹಾಕಿದ್ದಾರೆ.