ನವದೆಹಲಿ[ಆ.27]: ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ರೈಡಿಂಗ್’ನಲ್ಲಿ ಮಿಂಚಿದರೂ ಡಿಫೆಂಡಿಂಗ್’ನಲ್ಲಿ ಎಡವಿದ ಬೆಂಗಾಲ್ ವಾರಿಯರ್ಸ್ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧ 33-36 ಅಂಕಗಳಿಂದ ಮಂಡಿಯೂರಿತು. ಇದರೊಂದಿಗೆ ಸುಲಭವಾಗಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ವಿಕಾಸ್ ಖಂಡೋಲಾ ಹಾಗೂ ನಾಯಕ ಧರ್ಮರಾಜ್ ಚೆರ್ಲಾತನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

PKL 2019: ಜೈಪುರ ಮಣಿಸಿ ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್

ಇಲ್ಲಿನ ತ್ಯಾಗರಾಜ ಕ್ರೀಡಾ ಸಮುಚ್ಚಯದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲಿಗೆ ಬೆಂಗಾಲ್‌ ಆಟಗಾರರು ಮೇಲುಗೈ ಸಾಧಿಸಿದರೂ, ಪಂದ್ಯ ಸಾಗುತ್ತಿದ್ದಂತೆ ತಪ್ಪುಗಳ ಮೇಲೆ ತಪ್ಪುಗಳ ಎಸಗುತ್ತಾ ಸಾಗಿದರು. ಒಂದೆಡೆ ನಾಯಕ ಮಣೀಂದರ್‌ ಸಿಂಗ್‌, ಪ್ರಪಂಜನ್‌ ಅಂಕಗಳ ಹೆಕ್ಕುತ್ತಿದ್ದರೆ, ಡಿಫೆಂಡರ್‌ಗಳು ಅನಾವಶ್ಯಕ ಟ್ಯಾಕಲ್‌ಗಳಿಗೆ ಮುಂದಾಗಿ ಕೈಸುಟ್ಟುಕೊಂಡರು. ಪರಿಣಾಮ ಪಂದ್ಯದ 10ನೇ ನಿಮಿಷದಲ್ಲಿ ಹರಾರ‍ಯಣವನ್ನು ಆಲೌಟ್‌ ಮಾಡಿ 14-10 ಮುನ್ನಡೆ ಸಾಧಿಸಿದ್ದ ಬೆಂಗಾಲ್‌ ತಂಡವು, ಮೊದಲಾರ್ಧದ ಅಂತ್ಯಕ್ಕೆ 17-18ರಿಂದ ಹಿನ್ನಡೆ ಅನುಭವಿಸಿತು. 

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ದ್ವಿತಿಯಾರ್ಧದ ಮೊದಲ ನಿಮಿಷದಲ್ಲೇ ಬೆಂಗಾಲ್‌ ಅನ್ನು ಆಲೌಟ್‌ ಮಾಡಿ ಅಂತರವನ್ನು 22-18ಕ್ಕೆ ಏರಿಸಿಕೊಂಡ ಹರಾರ‍ಯಣ, ಗೆಲು​ವಿ​ನತ್ತ ಮುನ್ನು​ಗ್ಗಿತು. ಅಂತಿ​ಮ​ವಾಗಿ 3 ಅಂಕ​ಗ​ಳಿಂದ ಗೆಲುವು ಸಾಧಿ​ಸಿತು.

ಶ್ರೇಷ್ಠ ರೈಡರ್‌: ಮಣೀಂದರ್‌, 15 ಅಂಕ, ಬೆಂಗಾಲ್‌

ಶ್ರೇಷ್ಠ ಡಿಫೆಂಡರ್‌: ಧರ್ಮರಾಜ್‌, 4 ಅಂಕ, ಹರಾರ‍ಯಣ

ಯೋಧಾಗೆ ತಲೆ​ಬಾ​ಗಿದ ಪಲ್ಟನ್‌

ಸೋಮ​ವಾರ ನಡೆದ 2ನೇ ಪಂದ್ಯ​ದ​ಲ್ಲಿ ಪುಣೇರಿ ಪಲ್ಟನ್‌ ವಿರುದ್ಧ ಯು.ಪಿ.​ಯೋಧಾ 35-30 ಅಂಕ​ಗಳ ಅಂತ​ರ​ದಲ್ಲಿ ಗೆಲುವು ಸಾಧಿ​ಸಿತು. ಶ್ರೀಕಾಂತ್‌ ಜಾಧವ್‌ (15 ರೈಡ್‌ ಅಂಕ​) ಯೋಧಾ ಗೆಲು​ವಿ​ನಲ್ಲಿ ಪ್ರಮುಖ ಪಾತ್ರ ವಹಿ​ಸಿ​ದರು. ಯೋಧಾ​ಗಿದು 4ನೇ ಗೆಲು​ವಾ​ಗಿದ್ದು, ಅಂಕ​ಪ​ಟ್ಟಿ​ಯ​ಲ್ಲಿ 7ನೇ ಸ್ಥಾನ​ಕ್ಕೇ​ರಿದೆ. ಪುಣೆ 6ನೇ ಸೋಲು ಕಂಡಿದ್ದು, 11ನೇ ಸ್ಥಾನ​ದಲ್ಲೇ ಉಳಿ​ದಿದೆ.

ವರದಿ: ವಿನಯ್‌ ಕುಮಾರ್‌ ಡಿ.ಬಿ.