Asianet Suvarna News Asianet Suvarna News

ಪಿಬಿಎಲ್ 4 ಮುಂಬೈ ರಾಕೆಟ್ಸ್‌ ಗೆಲುವಿನ ಶುಭಾರಂಭ

ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ವಿಶ್ವ ನಂ.201 ಭಾರತದ ಶ್ರೇಯಾಂಶಿ ಪರದೇಶಿ, ವಿಶ್ವ ನಂ.32 ರಷ್ಯಾದ ಎವ್ಗೇನಿಯಾ ಕೊಸೆಟ್ಸ್‌ಕಾಯಾರನ್ನು 12-15, 15-8, 15-12 ಗೇಮ್‌ಗಳಿಂದ ಪರಾಭವಗೊಳಿಸಿ ಅಚ್ಚರಿ ಮೂಡಿಸಿದರು.

PBL 4 Mumbai Rockets register dominating win over Delhi Dashers
Author
Mumbai, First Published Dec 24, 2018, 12:07 PM IST

ಮುಂಬೈ, ಡೆಲ್ಲಿ ಡ್ಯಾಶ​ರ್ಸ್ ತಂಡವನ್ನು 5-0 ಅಂತರದಿಂದ ಪರಾಭವಗೊಳಿಸಿದೆ. ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ವಿಶ್ವ ನಂ.201 ಭಾರತದ ಶ್ರೇಯಾಂಶಿ ಪರದೇಶಿ, ವಿಶ್ವ ನಂ.32 ರಷ್ಯಾದ ಎವ್ಗೇನಿಯಾ ಕೊಸೆಟ್ಸ್‌ಕಾಯಾರನ್ನು 12-15, 15-8, 15-12 ಗೇಮ್‌ಗಳಿಂದ ಪರಾಭವಗೊಳಿಸಿ ಅಚ್ಚರಿ ಮೂಡಿಸಿದರು.

ಇದಕ್ಕೂ ಮೊದಲು ಮುಂಬೈ ರಾಕೆಟ್ಸ್‌ ತಂಡದ ಡಬಲ್ಸ್‌ ಜೋಡಿ ದ.ಕೊರಿಯಾದ ಕಿಮ್‌ ಜಿ ಜಂಗ್‌-ಲೀ ಯಾಂಗ್‌ ಡೇ, ಚೈ ಬಿಯಾವೋ-ವಾಂಗ್‌ ಸಿಜೆ ಜೋಡಿಯನ್ನು 14-15, 15-12, 15-9 ಗೇಮ್‌ಗಳಿಂದ ಪರಾಭವಗೊಳಿಸಿ ಉತ್ತಮ ಆರಂಭ ನೀಡಿತು. ಬಳಿಕ ನಡೆದ ಸಿಂಗಲ್ಸ್‌ ಪಂದ್ಯದಲ್ಲಿ ಡೆನ್ಮಾರ್ಕ್ ಆ್ಯಂಡ್ರೆಸ್‌ ಅಂಟೋನ್‌ಸೆನ್‌, ಇಂಡೋನೇಷ್ಯಾದ ಸುಗಿಯಾರ್ಟೋರನ್ನು 15-13, 15-7 ನೇರ ಗೇಮ್‌ಗಳಿಂದ ಮಣಿಸಿ, ಮುಂಬೈ ತಂಡದ ಮುನ್ನಡೆಯನ್ನು 2-0ಗೇರಿಸಿದರು.

ನಂತರದಲ್ಲಿ ಭಾರತದವರೇ ಆದ ಸಮೀರ್‌ ವರ್ಮಾ ಮತ್ತು ಎಚ್‌.ಎಸ್‌.ಪ್ರಣಯ್‌ ಮುಖಾಮುಖಿಯಾದರು. ಸಮೀರ್‌ ಆಟಕ್ಕೆ ತಲೆಬಾಗಿದ ಪ್ರಣಯ್‌, 15-14, 15-9 ನೇರ ಗೇಮ್‌ಗಳಿಂದ ಸೋಲನುಭವಿಸಿದರು. ಅಂತಿಮ ಮಿಶ್ರ ಡಬಲ್ಸ್‌ ಪಂದ್ಯದಲ್ಲಿ ಲೀ ಯಾಂಗ್‌ ಡೇ-ಯಾ ಜೆಬಾದಿಯಾ, ಡೆಲ್ಲಿಯ ಲೀ ಚಿಯಾ ಸಿನ್‌-ಮನೀಪಾಂಗ್‌ ಜಂಗ್ಜೀತ್‌ರನ್ನು 15-11, 15-12 ನೇರ ಗೇಮ್‌ಗಳಿಂದ ಮಣಿಸಿ 4-0 ಮುನ್ನಡೆ ಸಾಧಿಸಿದರು.

Follow Us:
Download App:
  • android
  • ios