Asianet Suvarna News Asianet Suvarna News

ಯುಎಸ್ ಓಪನ್: ಫೈನಲ್’ಗಾಗಿ ಜೋಕೋವಿಕ್-ನಿಶಿಕೋರಿ ನಡುವೆ ಕಾದಾಟ

ಜೋಕೋವಿಚ್, ಆಸ್ಟ್ರೇಲಿಯಾದ ಜಾನ್ ಮಿಲ್‌ಮನ್ ವಿರುದ್ಧ 6-3, 6-4, 6-4 ಸೆಟ್'ಗಳಲ್ಲಿ ಜಯ ಸಾಧಿಸಿದರು. 55ನೇ ರ‍್ಯಾಂಕಿಂಗ್‌ ಆಟಗಾರ ಮಿಲ್‌ಮನ್, 4ನೇ ಸುತ್ತಿನಲ್ಲಿ ಫೆಡರರ್‌ಗೆ ಶಾಕ್ ನೀಡಿದ್ದರು. 

Novak Djokovic to meet Kei Nishikori in US Open semifinals
Author
New York, First Published Sep 7, 2018, 9:49 AM IST

ನ್ಯೂಯಾರ್ಕ್[ಸೆ.07]: ಸರ್ಬಿಯಾದ ನೊವಾಕ್ ಜೋಕೋವಿಚ್ ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ 33ನೇ ಬಾರಿ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕರ ಘಟ್ಟಕ್ಕೇರಿದ ವಿಶ್ವ ಟೆನಿಸ್‌ನ 2ನೇ ಆಟಗಾರ ಎಂಬ ಶ್ರೇಯಕ್ಕೆ ಜೋಕೋವಿಚ್ ಪಾತ್ರರಾದರು.

ಜೋಕೋವಿಚ್, ಆಸ್ಟ್ರೇಲಿಯಾದ ಜಾನ್ ಮಿಲ್‌ಮನ್ ವಿರುದ್ಧ 6-3, 6-4, 6-4 ಸೆಟ್'ಗಳಲ್ಲಿ ಜಯ ಸಾಧಿಸಿದರು. 55ನೇ ರ‍್ಯಾಂಕಿಂಗ್‌ ಆಟಗಾರ ಮಿಲ್‌ಮನ್, 4ನೇ ಸುತ್ತಿನಲ್ಲಿ ಫೆಡರರ್‌ಗೆ ಶಾಕ್ ನೀಡಿದ್ದರು. 

ನಿಶಿಕೋರಿಗೆ ಜಯ: 2014ರ ಯುಎಸ್ ಓಪನ್ ಫೈನಲಿಸ್ಟ್ ಜಪಾನ್‌ನ ಕೇ ನಿಶಿಕೋರಿ, ನಾಲ್ಕರ ಘಟ್ಟಕ್ಕೇರಿದ್ದಾರೆ. ಕ್ವಾರ್ಟರ್‌ನಲ್ಲಿ ನಿಶಿಕೋರಿ 2-6, 6-4, 7-6, 4-6, 6-4 ಸೆಟ್ ಗಳಲ್ಲಿ ಕ್ರೋವೇಷಿಯಾದ ಮರಿನ್ ಸಿಲಿಕ್ ವಿರುದ್ಧ ಗೆಲುವು ಪಡೆದರು. ಕಳೆದ ವರ್ಷ ಗಾಯದ ಸಮಸ್ಯೆಯಿಂದಾಗಿ ನಿಶಿಕೋರಿ ಯುಎಸ್ ಓಪನ್‌ನಿಂದ ದೂರ ಉಳಿದಿದ್ದರು.

ಇದೀಗ ಫೈನಲ್’ಗಾಗಿ ಜೋಕೋವಿಕ್ ಹಾಗೂ ನಿಶಿಕೋರಿ ಕಾದಾಡಲಿದ್ದಾರೆ.

ನಾಲ್ಕರ ಘಟ್ಟಕ್ಕೆ ಒಸಾಕ: ಜಪಾನ್‌ನ ಟೆನಿಸ್ ಆಟಗಾರ್ತಿ ನವೋಮಿ ಒಸಾಕ, ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಗ್ರ್ಯಾಂಡ್ ಸ್ಲಾಮ್ ಟೂರ್ನಿಯೊಂದರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 22 ವರ್ಷಗಳ ಬಳಿಕ ಜಪಾನ್ ಆಟಗಾರ್ತಿ ಯೊಬ್ಬರು ಸೆಮೀಸ್‌ಗೇರಿದ್ದು ಇದೇ ಮೊದಲ ಬಾರಿಯಾಗಿದೆ. ಕ್ವಾರ್ಟರ್‌ಫೈನಲ್‌ನಲ್ಲಿ 20 ವರ್ಷದ ಆಟಗಾರ್ತಿ ಒಸಾಕ, 6-1, 6-1 ಸೆಟ್‌ಗಳಲ್ಲಿ ಉಕ್ರೇನ್‌ನ ಲೆಸಿಯಾ ಟ್ಸುರೆಂಕೊ ವಿರುದ್ಧ ಗೆಲುವು ಪಡೆದರು.

1996ರ ವಿಂಬಲ್ಡನ್‌ನಲ್ಲಿ ಜಪಾನ್‌ನ ಆಟಗಾರ್ತಿ ಕಿಮಿಕೊ ಡೇಟ್ ಸೆಮೀಸ್'ಗೇರಿದ್ದರು. ಅದೇ ವರ್ಷ ಒಸಾಕ ಜನಿಸಿದ್ದರು. ಚೊಚ್ಚಲ ಬಾರಿಗೆ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೇರುವ ಅವಕಾಶ ಒಸಾಕಗೆ ಲಭಿಸಿದೆ. ಜಪಾನ್‌ನ ಪುರುಷ ಮತ್ತು ಮಹಿಳಾ ಟೆನಿಸಿಗರು ಒಂದೇ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿರುವುದು ಇದು ಮೊದಲ ಬಾರಿ. ಅಮೆರಿಕದ ಮ್ಯಾಡಿಸನ್ ಕೀಸ್, ಸ್ಪೇನ್‌ನ ಕಾಲ್ರಾ ಸೂರೆಜ್ ಎದುರು 6-4, 6-3 ಸೆಟ್ ಗಳಲ್ಲಿ ಗೆದ್ದು ಸೆಮೀಸ್‌ಗೆ ಲಗ್ಗೆ ಇಟ್ಟರು.

Follow Us:
Download App:
  • android
  • ios