ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ನಿರಾಕರಿಸಿದ ನ್ಯೂಜಿಲೆಂಡ್!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 31, Jul 2018, 9:16 PM IST
New Zealand refuse to tour Pakistan for security reasons
Highlights

ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಪುನರ್ ಆರಂಭಿಸಲು ಪಿಸಿಬಿ ಪ್ರಯತ್ನಕ್ಕೆ ಪ್ರತಿ ಭಾರಿ ಹಿನ್ನಡೆಯಾಗುತ್ತಿದೆ. ಇದೀಗ ನ್ಯೂಜಲೆಂಡ್ ಕ್ರಿಕೆಟ್, ಪಾಕಿಸ್ತಾನ ನೆಲಕ್ಕೆ ಕಾಲಿಡಲು ಸಾಧ್ಯವಿಲ್ಲ ಎಂದಿದೆ. ಅಷ್ಟಕ್ಕೂ ನ್ಯೂಜಿಲೆಂಡ್ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ 

ವೆಲ್ಲಿಂಗ್ಟನ್(ಜು.31): ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸರಣಿ ಆಯೋಜಿಸಲು ಹರಸಾಹಸ ಪಟ್ಟ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮತ್ತೆ ಹಿನ್ನಡೆಯಾಗಿದೆ. ಸೌತ್ ಏಷ್ಯನ್ ರಾಷ್ಟ್ರಗಳ ಟಿ20 ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಲು ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್ ಕ್ರೆಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ವೇಳಾಪಟ್ಟಿ ಪ್ರಕಾರ, ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ಧ 3 ಟೆಸ್ಟ್, 3 ಏಕದಿನ ಹಾಗೂ ಟಿ20 ಸರಣಿ ಆಡಲು ದುಬೈಗೆ ತೆರಳಲಿದೆ. ಆದರೆ ಪಾಕಿಸ್ತಾನ ಅಂತಿಮ ಟಿ20 ಸರಣಿಯನ್ನ ಪಾಕಿಸ್ತಾನದಲ್ಲಿ ಆಯೋಜಿಸಲು ನಿರ್ಧರಿಸಿತ್ತು. ಇದಕ್ಕಾಗಿ ನ್ಯೂಜಿಲೆಂಡ್‌ಗೆ ಮನವಿ ಮಾಡಿತ್ತು.

ಪಾಕಿಸ್ತಾನದ ಮನವಿ ತಿರಸ್ಕರಿಸಿದ ನ್ಯೂಜಿಲೆಂಡ್, ಭದ್ರತಾ ಕಾರಣದಿಂದ ಪಾಕಿಸ್ತಾನ ಪ್ರವಾಸ ಮಾಡಲು ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಗ್ರೇಗ್ ಬಾರ್ಕ್ಲೇ ಹೇಳಿದ್ದಾರೆ. ಈ ನಿರ್ಧಾರ ಪಾಕಿಸ್ತಾನ ಮಂಡಳಿಗೆ ಬೇಸರ ತರಿಸಲಿದೆ ಅನ್ನೋದು ತಿಳಿದಿದೆ. ಆದರೆ ನಮ್ಮ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.

2009ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಈ ವೇಳೆ ಭಯೋತ್ವಾದಕರ ದಾಳಿಯಿಂದ ಲಂಕಾ ಕ್ರಿಕೆಟಿಗರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಈ ಘಟನೆ ಬಳಿಕ ಯಾವ ತಂಡವೂ ಪಾಕಿಸ್ತಾನ ಪ್ರವಾಸ ಮಾಡೋ ಧರ್ಯ ಮಾಡಿಲ್ಲ. ಆದರೆ 2015ರಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನ ಪ್ರವಾಸ ಮಾಡಿತ್ತು. ಇತ್ತೀಚೆಗೆ ವೆಸ್ಟ್ಇಂಡೀಸ್ ತಂಡ 3 ಟಿ20 ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಿತ್ತು. 

loader