Asianet Suvarna News Asianet Suvarna News

ಹಲವು ವಿಘ್ನಗಳ ನಡುವೆಯೂ 2019ರ ಐಪಿಎಲ್‌ಗೆ ಗುಡ್ ನ್ಯೂಸ್!

2019ರ ಐಪಿಎಲ್ ಟೂರ್ನಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಇದೀಗ ಇದರ ನಡುವೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಇದು ಬಿಸಿಸಿಐಗೆ ನೆಮ್ಮದಿ ತಂದಿದೆ. ಹಾಗಾದರೆ ವಿಘ್ನಗಳ ನಡುವೆ ಐಪಿಎಲ್‌ಗೆ ಎದುರಾದ ಗುಡ್ ನ್ಯೂಸ್ ಏನು? ಇಲ್ಲಿದೆ ವಿವರ.

New Zealand Cricket grants players permission to play full IPL season next year
Author
Bengaluru, First Published Nov 12, 2018, 7:39 PM IST

ಮುಂಬೈ(ನ.12): 2019ರ ಐಪಿಎಲ್ ಟೂರ್ನಿ ಆಯೋಜನೆ ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. 2019ರ ಲೋಕಸಭಾ ಚುನಾವಣೆಯಿಂದ ಐಪಿಎಲ್ ಟೂರ್ನಿಯನ್ನ ಸೌತ್ಆಫ್ರಿಕಾ ಅಥಾ ದುಬೈಗೆ ಸ್ಥಳಾಂತರಿಸುವ ಕುರಿತು ಇನ್ನು ಅಂತಿಮ ತೀರ್ಮಾನವಾಗಿಲ್ಲ. ಮತ್ತೊಂದೆಡೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟಿಗರು ಸಂಪೂರ್ಣ ಟೂರ್ನಿಗೆ ಲಭ್ಯವಿರೋದಿಲ್ಲ ಎಂದು ಆಯಾ ದೇಶದ ಕ್ರಿಕೆಟ್ ಸಂಸ್ಥೆಗಳು ಹೇಳಿದೆ.

ಹಲವು ವಿಘ್ನಗಳ ನಡುವೆ 2019ರ ಐಪಿಎಲ್ ಟೂರ್ನಿಗೆ ಗುಡ್ ನ್ಯೂಸ್ ಸಿಕ್ಕಿದೆ. 12ನೇ ಆವೃತ್ತಿಗೆ ನ್ಯೂಜಿಲೆಂಡ್ ಕ್ರಿಕೆಟಿಗರು ಸಂಪೂರ್ಣವಾಗಿ ಲಭ್ಯರಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ. ನ್ಯೂಜಿಲೆಂಡ್‌ನ ಎಲ್ಲಾ ಆಟಗಾರರಿಗೆ ಐಪಿಎಲ್ ಆಡಲು ಈಗಾಗಲೇ ಗ್ರೀನ್ ಸಿಗ್ನಲ್ ನೀಡಲಾಗಿದೆ.

ನ್ಯೂಜಿಲೆಂಡ್ ನಿರ್ಧಾರದಿಂದ ಕೇನ್ ವಿಲಿಯಮ್ಸನ್, ಕಾಲಿನ್ ಮುನ್ರೋ, ಟಿಮ್ ಸೌಥಿ,  ಟ್ರೆಂಟ್ ಬೋಲ್ಡ್, ಆ್ಯಡಮ್ ಮಿಲ್ನೆ, ಮೆಚೆಲ್ ಮೆಕ್‌ಲೆನಾಘನ್ ಸೇರಿದಂತೆ ಸ್ಟಾರ್ ಆಟಗಾರರು ನಿಟ್ಟುಸಿರುಬಿಟ್ಟಿದ್ದಾರೆ. 

Follow Us:
Download App:
  • android
  • ios