ನವದೆಹಲಿ(ಸೆ.20): 2018ರ ಕ್ರೀಡಾ ಕ್ಷೇತ್ರದ ಅತ್ಯುನ್ನತ ಖೇಲ್ ರತ್ನ ಪ್ರಶಸ್ತಿ ಪ್ರಕಟಗೊಂಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹಿಳಾ ವೇಟ್‌ಲಿಫ್ಟರ್ ಮೀರಾ ಭಾಯಿ ಚಾನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

 

ಕೊಹ್ಲಿ-ಮೀರಾಬಾಯಿಗೆ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದರೆ, ಕಾಮನ್ ವೆಲ್ಸ್, ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ, ಓಟಗಾರ್ತಿ ಹಿಮಾ ದಾಸ್, ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ, ಕನ್ನಡಿಗ ಟೆನಿಸ್ ಪಟು ರೋಹನ್ ಬೋಪಣ್ಣ ಸೇರಿದಂತೆ 20 ಕ್ರೀಡಾಪಟುಗಳು ಅರ್ಜುನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಬಾಕ್ಸಿಂಗ್ ಕೋಚ್ ಕನ್ನಡಿಗ ಚೆನಂದ ಅಚ್ಚಯ್ಯ ಕುಟ್ಟಪ್ಪ, ವೇಟ್‌ಲಿಫ್ಟರ್ ಕೋಚ್ ವಿಜಯ್ ಶರ್ಮಾ ಸೇರಿದಂತೆ 8 ಮಾರ್ಗದರ್ಶಕರು ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕ್ರೀಡಾ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸೆಪ್ಟೆಂಬರ್ 25 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದೆ.

ಖೇಲ್ ರತ್ನ ಪ್ರಶಸ್ತಿ

ವಿರಾಟ್ ಕೊಹ್ಲಿ ಕ್ರಿಕೆಟ್
ಮೀರಾ ಬಾಯಿ ಚಾನು ವೇಟ್ ಲಿಫ್ಟರ್

 

ಅರ್ಜುನ ಪ್ರಶಸ್ತಿ:

ನೀರಜ್ ಚೋಪ್ರಾ ಅಥ್ಲೆಟಿಕ್ಸ್
ಜಿನ್ಸನ್ ಜಾನ್ಸನ್ ಅಥ್ಲೆಟಿಕ್ಸ್
ಹಿಮಾ ದಾಸ್ ಅಥ್ಲೆಟಿಕ್ಸ್
ಎನ್ ಸಿಕ್ಕಿ ರೆಡ್ಡಿ ಬ್ಯಾಡ್ಮಿಂಟನ್
ಸುಬೇದಾರ್ ಸತೀಶ್ ಕುಮಾರ್ ಬಾಕ್ಸಿಂಗ್
ಸ್ಮೃತಿ ಮಂದಾನ ಕ್ರಿಕೆಟ್
ಶುಭಾಂಕರ್ ಶರ್ಮಾ ಗಾಲ್ಫ್
ಮನ್‌ಪ್ರೀತ್ ಸಿಂಗ್ ಹಾಕಿ
ಸವಿತ ಹಾಕಿ
ರವಿ ರಾಥೋರ್ ಪೋಲೋ
ರಾಹಿ ಸರ್ನೋಬತ್ ಶೂಟಿಂಗ್
ಅಂಕುರ್ ಮಿತ್ತಲ್ ಶೂಟಿಂಗ್
ಶ್ರೇಯಸ್ ಸಿಂಗ್ ಶೂಟಿಂಗ್
ಬಾನಿಕ ಬಾತ್ರಾ ಟೇಬಲ್ ಟೆನಿಸ್
ಜಿ ಸತ್ಯನ್ ಟೇಬಲ್ ಟೆನಿಸ್
ರೋಹನ್ ಬೋಪಣ್ಣ ಟೆನಿಸ್
ಸುಮಿತ್ ರಸ್ಲಿಂಗ್
ಪೂಜಾ ಕಡಿಯನ್ ವುಶು
ಅಂಕುರ್ ದಾಮಾ ಪ್ಯಾರ ಅಥ್ಲೆಟಿಕ್ಸ್
ಮನೋಜ್ ಸರ್ಕಾರ್ ಪ್ಯಾರಾ ಅಥ್ಲೆಟಿಕ್ಸ್

 

ದ್ರೋಣಾಚಾರ್ಯ ಪ್ರಶಸ್ತಿ:

ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ಬಾಕ್ಸಿಂಗ್
ವಿಜಯ್ ಶರ್ಮಾ ವೇಟ್‌ಲಿಫ್ಟಿಂಗ್
ಶ್ರೀನಿವಾಸ ರಾವ್ ಟೇಬಲ್ ಟೆನಿಸ್
ಸುಖದೇವ್ ಸಿಂಗ್ ಪನ್ನು ಅಥ್ಲೆಟಿಕ್ಸ್
ಕ್ಲಾರೆನ್ಸ್ ಲೋಬೋ ಹಾಕಿ(ಜೀಮಾನಮಾನ ಶ್ರೇಷ್ಠ)
ತಾರಕ್ ಸಿನ್ಹ ಕ್ರಿಕೆಟ್(ಜೀಮಾನಮಾನ ಶ್ರೇಷ್ಠ)
ಜೀವನ್ ಕುಮಾರ್ ಶರ್ಮಾ ಜುಡೋ(ಜೀಮಾನಮಾನ ಶ್ರೇಷ್ಠ)
ವಿ.ಆರ್ ಬೀಡೂ ಅಥ್ಲೆಟಿಕ್ಸ್(ಜೀಮಾನಮಾನ ಶ್ರೇಷ್ಠ)