ರಾಷ್ಟ್ರಮಟ್ಟದ ಕಬಡ್ಡಿ ಹಿಮಾಚಲ ಪ್ರದೇಶ, ಹರಿಯಾಣ ಚಾಂಪಿಯನ್

ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಗೆ ನರಗುಂದ ಆತಿಥ್ಯ
ಅಕ್ಟೋಬರ್ 12 ರಿಂದ 14ರ ವರೆಗೆ ಮೂರು ದಿನಗಳ ಕಾಲ ನಡೆಸಲಾದ ರಾಷ್ಟ್ರಮಟ್ಟದ ಕಬಡ್ಡಿ
ಹಿಮಾಚಲ ಪ್ರದೇಶ ಪುರುಷರ ತಂಡ ಹಾಗೂ ಗುರುಕುಲ ಹರಿಯಾಣ ಮಹಿಳಾ ತಂಡ ಚಾಂಪಿಯನ್‌

National Leave Kabaddi Tournament in Naragunda HImachal Pradesh Champion kvn

ನರಗುಂದ(ಅ.16): ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯ ಪೈನಲ್‌ ಪಂದ್ಯಗಳು ಶನಿವಾರ ಬೆಳಗಿನ ಜಾವ ಜರುಗಿದ್ದು, ಹಿಮಾಚಲ ಪ್ರದೇಶ ಪುರುಷರ ತಂಡ ಹಾಗೂ ಗುರುಕುಲ ಹರಿಯಾಣ ಮಹಿಳಾ ತಂಡವು ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಪಂದ್ಯಾವಳಿಗೆ ಅದ್ಧೂರಿ ತೆರೆ ಎಳೆದರು.

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಅವರ 64ನೇ ಜನ್ಮದಿನದ ಪ್ರಯುಕ್ತ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅ. 12 ರಿಂದ 14ರ ವರೆಗೆ ಮೂರು ದಿನಗಳ ಕಾಲ ನಡೆಸಲಾದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪುರುಷರ 36 ತಂಡಗಳು ಹಾಗೂ ಮಹಿಳೆಯರ 23 ತಂಡಗಳು ಭಾಗವಹಿಸಿದ್ದವು. ಪ್ರಾರಂಭದಲ್ಲಿ ಪುರುಷರ 16 ಮತ್ತು ಮಹಿಳೆಯರ 12 ತಂಡಗಳು ನಾಕೌಟ್‌ ಹಂತಕ್ಕೆ ತಲುಪಿದ ನಂತರದ ಪಂದ್ಯಗಳು ಕುತೂಹಲಕಾರಿ ಪ್ರದರ್ಶನ ನೀಡಿದವು.

ನಾಕೌಟ್‌ ಹಂತದಲ್ಲಿ ಸೆಣಸಾಡಿದ ಪುರುಷರ ತಂಡಗಳಲ್ಲಿ ಎಂ.ಡಿ. ಯುನಿವರ್ಸಿಟಿ ರೋಹ್ಟಕ್‌ ತಂಡ - ಹಿಮಾಚಲ ಪ್ರದೇಶ ತಂಡ ಹಾಗೂ ಇನ್‌ಕಂ ಟ್ಯಾಕ್ಸ್‌ ಚೆನೈ ತಂಡ - ರೆಡ್‌ ಆರ್ಮಿ ನ್ಯೂ ಡೆಲ್ಲಿ ತಂಡಗಳು ಸೆಮಿಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವು. ಇವುಗಳಲ್ಲಿ ಹಿಮಾಚಲ ಪ್ರದೇಶ ತಂಡ ಹಾಗೂ ರೆಡ್‌ ಆರ್ಮಿ ನ್ಯೂ ಡೆಲ್ಲಿ ತಂಡಗಳು ಪೈನಲ್‌ ಹಂತಕ್ಕೆ ತಲುಪಿದವು. ಪೈನಲ್‌ ಪಂದ್ಯದಲ್ಲಿ ಅಂತಿಮವಾಗಿ ಹಿಮಾಚಲ ಪ್ರದೇಶ ಪುರುಷರ ತಂಡವು 44- 25 ಅಂಕಗಳ ಅಂತರದಿಂದ ರೆಡ್‌ ಆರ್ಮಿ ನ್ಯೂ ಡೆಲ್ಲಿ ತಂಡವನ್ನು ಸೋಲಿಸಿ ಪ್ರಶಸ್ತಿ ಹಾಗೂ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

ಮಹಿಳಾ ತಂಡಗಳಲ್ಲಿ ಗುರುಕುಲ ಹರಿಯಾಣ- ಸಾಯಿ ಸೋನಿಪಥ್‌ ಹಾಗೂ ಹಿಮಾಚಲ ಪ್ರದೇಶ- ಎಂ.ಡಿ. ಯುನಿವರ್ಸಿಟಿ ರೋಹ್ಟಕ್‌ ಈ ತಂಡಗಳು ಸೆಮಿಫೈನಲ್‌ ತಲುಪಿದವು. ತೀವ್ರ ಸೆಣಸಾಟದ ಬಳಿಕ ಪೈನಲ್‌ ತಲುಪಿದ ಗುರುಕುಲ ಹರಿಯಾಣ ಹಾಗೂ ಎಂ.ಡಿ. ಯುನಿವರ್ಸಿಟಿ ರೋಹ್ಟಕ್‌ ತಂಡಗಳ ನಡುವೆ ರೋಚಕ ಪಂದ್ಯ ಏರ್ಪಟ್ಟಿತು. ಗುರುಕುಲ ಹರಿಯಾಣ ಮಹಿಳೆಯರ ತಂಡವು 56- 30 ಅಂಕಗಳ ಅಂತರದಿಂದ ಗುರುಕುಲ ಹರಿಯಾಣ ತಂಡವು ಎಂ.ಡಿ. ಯುನಿವರ್ಸಿಟಿ ರೋಹ್ಟಕ್‌ ತಂಡವನ್ನು ಸೋಲಿಸಿ ಗೆಲುವಿನ ನಗೆ ಬೀರುವ ಮೂಲಕ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

ಬೆಳಗಿನ ವರೆಗೂ ನಡೆದ ಪಂದ್ಯಾವಳಿ:

ಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯು ಶನಿವಾರ ಬೆಳಗ್ಗೆ 5 ಗಂಟೆಗೆ ವರೆಗೂ ಜರುಗಿತು. ಪ್ರೇಕ್ಷಕರು ಸಹ ಅತ್ಯಂತ ಹುರುಪಿನಿಂದ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದು ಕಂಡುಬಂದಿತು. ಫೈನಲ್‌ ಪಂದ್ಯ ಮುಗಿಯುವ ವರೆಗೂ ಪ್ರೇಕ್ಷರನ್ನು ಹಿಡಿದಿಟ್ಟುಕೊಳ್ಳುವಲ್ಲಿ ತಂಡಗಳು ಯಶಸ್ವಿಯಾದವು.

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಹಿಮಾಚಲ ಪ್ರದೇಶ ತಂಡ 2.5ಲಕ್ಷ ರುಪಾಯಿ ಹಾಗೂ ಟ್ರೋಫಿ. ದ್ವಿತೀಯ ಸ್ಥಾನ ರೆಡ್‌ ಆರ್ಮಿ ನ್ಯೂ ಡೆಲ್ಲಿ ತಂಡವು .2 ಲಕ್ಷ ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆದ ಎಂ.ಡಿ. ಯುನಿವರ್ಸಿಟಿ ರೋಟಕ್‌ ತಂಡ .1.5 ಲಕ್ಷ, ನಾಲ್ಕನೇ ಸ್ಥಾನವನ್ನು ಇನಕಮ್‌ ಟ್ಯಾಕ್ಸ್‌ ತಂಡವು .1.5 ಲಕ್ಷ ಬಹುಮಾನ ಪಡೆದುಕೊಂಡಿವೆ ಎಂದು ಲಯನ್ಸ್‌ ಅಧ್ಯಕ್ಷ ಉಮೇಶಗೌಡ ಪಾಟೀಲ ತಿಳಿಸಿದರು.

ನರಗುಂದದಲ್ಲಿ Pro Kabaddi ನೆನಪಿಸಿದ ಪಂದ್ಯಾವಳಿ..!

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗುರುಕುಲ ಹರಿಯಾಣ ತಂಡ .2 ಲಕ್ಷ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಎಂ.ಡಿ. ಯುನಿವರ್ಸಿಟಿ ರೋಟಕ್‌ ತಂಡವು 1.5 ಲಕ್ಷ ಹಾಗೂ ಟ್ರೋಪಿ, ತೃತೀಯ ಸ್ಥಾನವನ್ನು ಸಾಯಿ ಸೋನಿಪಥ್‌ 1 ಲಕ್ಷ, ನಾಲ್ಕನೇ ಸ್ಥಾನವನ್ನು ಹಿಮಾಚಲ ಪ್ರದೇಶ ತಂಡವು .1 ಲಕ್ಷ ಬಹುಮಾನ ಪಡೆದಿರುವುದಾಗಿ ತಾಂತ್ರಿಕ ವಿಭಾಗದ ಟೆಕ್ನಿಕಲ್‌ ಚೇರಮನ್‌ ಈಶ್ವರ ಅಂಗಡಿ ತಿಳಿಸಿದರು.

ಪುರುಷರಲ್ಲಿ ಅತ್ಯುತ್ತಮ ದಾಳಿಗಾರ ಪ್ರಶಸ್ತಿಯನ್ನು ರೆಡ್‌ ಆರ್ಮಿ ತಂಡದ ಮೋಹಿತ್‌ ಮೌಲಿ ಪಡೆದರೆ, ಅತ್ಯುತ್ತಮ ಹಿಡಿತಗಾರ ಪ್ರಶಸ್ತಿಗೆ ಎಂ.ಡಿ. ಯುನಿವರ್ಸಿಟಿ ರೋಹ್ಟಕ್‌ ತಂಡದ ಸಂಜೀವ ಆಯ್ಕೆಯಾದರು. ಅತ್ಯುತ್ತಮ ಆಲರೌಂಡರ್‌ ಪ್ರಶಸ್ತಿಯನ್ನು ಹಿಮಾಚಲ ಪ್ರದೇಶದ ಮಯಾಂಕ್‌ ಪಡೆದರೆ ಸರ್ವೋತ್ತಮ ಆಟಗಾರನಾಗಿ ಹಿಮಾಚಲ ಪ್ರದೇಶದ ಜಿತೇಂದ್ರ ಪ್ರಶಸ್ತಿಯನ್ನು ಪಡೆದುಕೊಂಡರು.

ಮಹಿಳೆಯರಲ್ಲಿ ಅತ್ಯುತ್ತಮ ದಾಳಿಗಾರ್ತಿಯಾಗಿ ಎಂ.ಡಿ. ಯುನಿವರ್ಸಿಟಿ ರೋಹ್ಟಕ್‌ ತಂಡದ ತನು ಪಡೆದರೆ, ಅತ್ತುತ್ತಮ ಹಿಡಿತಗಾರ್ತಿಯಾಗಿ ಹಿಮಾಚಲ ಪ್ರದೇಶ ತಂಡದ ಸಾಕ್ಷಿ ಪಟು ಆಯ್ಕೆಯಾದಳು. ಅತ್ಯುತ್ತಮ ಆಲರೌಂಡರಾಗಿ ಹರಿಯಾಣ ಗುರುಕುಲ ತಂಡದ ಪೂಜಾ ಆಯ್ಕೆಯಾದಳು. ಸರ್ವೋತ್ತಮ ಆಟಗಾರ್ತಿಯಾಗಿ ತಮಿಳುನಾಡಿನ ಶಕ್ತಿ ಬ್ರದರ್ಸ್‌ ತಂಡದ ಆಟಗಾರ್ತಿ ಸೌಂದರ್ಯ ಆಯ್ಕೆಯಾದರು.

ಈ ಸಂದರ್ಭದಲ್ಲಿ ಅರ್ಜುನ ಪ್ರಶಸ್ತಿ ಪಡೆದ ಡಾ. ಹೊನ್ನಪ್ಪಗೌಡ, ಈಶ್ವರ ಅಂಗಡಿ, ಸಂಗನಗೌಡ ಪಾಟೀಲ, ಮಹೇಶಗೌಡ ಪಾಟೀಲ, ಎಂ.ಎಂ. ಕಲಹಾಳ, ಚನ್ನಯ್ಯ ಸಂಗಳಮಠ, ಸಿದ್ದೇಶ್‌ ಹೂಗಾರ, ರಾಜುಗೌಡ ಪಾಟೀಲ, ಎನ್‌.ವಿ. ಮೇಟಿ, ಮಲ್ಲಪ್ಪ ಮೇಟಿ, ಮಂಜು ಮೆಣಸಗಿ, ನವೀನ ಪಾಟೀಲ, ಪ್ರಕಾಶ ಪಟ್ಟಣಶೆಟ್ಟಿ, ಶಂಕರಗೌಡ ಪಾಟೀಲ, ಹನಮಂತ ಹದಗಲಿ, ಸತೀಶಗೌಡ ಪಾಟೀಲ, ಪ್ರಕಾಶಗೌಡ ತಿರಕನಗೌಡ್ರ, ಚಂದ್ರು ದಂಡಿನ, ಸಂತೋಷ ಹಂಚಿನಾಳ, ಸೋಮು ಹೊಂಗಲ, ಅನಿಲ ಧರಿಯಣ್ಣವರ, ಅಶೋಕ ಸಾಲೂಟಿಗಿ, ವಿಠ್ಠಲ ಹವಾಲ್ದಾರ, ವಿಠ್ಠಲ ಜಾಮದಾರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios