ಪಾಕಿಸ್ತಾನ ತಂಡ 2019ರ ವಿಶ್ವಕಪ್ ಪ್ರಶಸ್ತಿ ಗೆಲ್ಲುತ್ತಾ?

First Published 16, Jul 2018, 8:22 PM IST
Nasser Hussain picks his favourite team to win 2019 World Cup
Highlights

2019ರ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಯಾವುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೈನ್, ಮುಂಬರುವ ವಿಶ್ವಕಪ್ ಗೆಲ್ಲೋದು ಪಾಕಿಸ್ತಾನ ಎಂದಿದ್ದಾರೆ. ಇದಕ್ಕೆ ನಾಸಿರ್ ನೀಡಿದ ಕಾರಣವೇನು? ಇಲ್ಲಿದೆ.

ಲಂಡನ್(ಜು.16): 2019ರ ವಿಶ್ವಕಪ್ ಟೂರ್ನಿಗೆ ಬಹುತೇಕ ಎಲ್ಲಾ ತಂಡಗಳ ತಯಾರಿ ಆರಂಭಗೊಂಡಿದೆ. ಇದರ ನಡುವೆ ಮುಂಬರುವ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡ ಯಾವುದು ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ.

2019ರ ವಿಶ್ವಕಪ್ ಗೆಲ್ಲೋ ಫೇವರಿಟ್ ತಂಡಗಳಲ್ಲಿ ಟೀಂ ಇಂಡಿಯಾ ಕೂಡ ಮುಂಚೂಣಿಯಲ್ಲಿದೆ. ಆದರೆ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೈನ್ ಮುಂಬರುವ ವಿಶ್ವಕಪ್ ಗೆಲ್ಲೋದು ಪಾಕಿಸ್ತಾನ ಎಂದಿದ್ದಾರೆ. 

2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ ಆಗಿತ್ತು. ಪಾಕಿಸ್ತಾನ ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿದೆ. ಪಾಕ್ ತಂಡದ ಬೌಲಿಂಗ್‌ನಿಂದಲೇ ವಿಶ್ವಕಪ್ ಗೆಲ್ಲಲಿದೆ ಎಂದು ನಾಸಿರ್ ಹೇಳಿದ್ದಾರೆ.

ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಬಲಿಷ್ಠ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಚಾಂಪಿಯನ್ಸ್ ಟ್ರೋಫಿ ಗೆದ್ದ  ರೀತಿಯಲ್ಲೇ ಮುಂಬರುವ ವಿಶ್ವಕಪ್ ಗೆದ್ದರೂ ಆಶ್ಚರ್ಯವಿಲ್ಲ.

loader