Asianet Suvarna News Asianet Suvarna News

ಕೊಹ್ಲಿಗೂ ಆಗದ ದಾಖಲೆ ಮಾಡಿದ ಬಾಂಗ್ಲಾ ಕ್ರಿಕೆಟಿಗ!

ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಅದ್ವಿತೀಯ ಸಾಧನೆ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ , ಇಂಗ್ಲೆಂಡ್ ನಾಯಕ ಜೋ ರೂಟ್‌ನಂತ ಇನ್‌ಫಾರ್ಮ್ ಬ್ಯಾಟ್ಸ್‌ಮನ್‌ಗಳಿಗೇ ಸಾಧ್ಯವಾಗದ ದಾಖಲೆಯನ್ನ ರಹೀಮ್ ಬರೆದಿದ್ದಾರೆ.

Mushfiqur Rahim first batsman to score double centuries in this year
Author
Bengaluru, First Published Nov 12, 2018, 3:37 PM IST

ಢಾಕ(ನ.12): ಜಿಂಬಾಬ್ವೆ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಹೀಮ್ 421 ಎಸೆತದಲ್ಲಿ 18 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 219 ರನ್ ಸಿಡಿಸಿದ್ದಾರೆ.

ಮುಶ್ಫಿಕರ್ ರಹೀಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸುತ್ತಿದ್ದಂತೆ, ಅಪರೂಪದ ದಾಖಲೆಯೊಂದನ್ನ ಬರೆದಿದ್ದಾರೆ. ಪ್ರಸಕ್ತ ವರ್ಷದಲ್ಲಿ(2018) ಯಾವೊಬ್ಬ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್  ದ್ವಿಶತಕ ಸಿಡಿಸಿಲ್ಲ. ಪ್ರತಿ  ಪಂದ್ಯದಲ್ಲಿ ದಾಖಲೆ ಬರೆಯುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಈ ವರ್ಷ ಡಬಲ್ ಸೆಂಚುರಿ ಸಿಡಿಸಿಲ್ಲ. ಇದೀಗ ಕೊಹ್ಲಿ ಮಾಡದ ಸಾಧನೆಯನ್ನ ಮುಶ್ಫಿಕರ್ ರಹೀಮ್ ಮಾಡಿದ್ದಾರೆ.

58 ವರ್ಷಗಳ ಹಿಂದೆ ಅಂದರೆ 1963ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವೊಬ್ಬ ಕ್ರಿಕೆಟಿಗನೂ ದ್ವಿಶತಕ ಸಿಡಿಸಿಲ್ಲ. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಸರ್ ಕಾನ್ರಾಡ್ ಹಂಡೆ 182 ರನ್ ಸಿಡಿಸಿದ್ದರು. ಇದೇ ಗರಿಷ್ಟ ಮೊತ್ತವಾಗಿತ್ತು. ಇದಾದ ಬಳಿಕ ಪ್ರತಿ ವರ್ಷ ಯಾರಾದರೊಬ್ಬರು ಡಬಲ್ ಸೆಂಚುರಿ ಸಿಡಿಸಿದ್ದಾರೆ.  ಆದರೆ ಈ ಭಾರಿ ವರ್ಷ ಅಂತ್ಯದಲ್ಲಿ ಮುಶ್ಫಿಕರ್ ರಹೀಮ್ ಸಾಧನೆಯಿಂದ ಒಂದು ಡಬಲ್ ಸೆಂಚುರಿ ದಾಖಲಾಗಿದೆ.

Follow Us:
Download App:
  • android
  • ios