Asianet Suvarna News Asianet Suvarna News

ಸೋಂಕಿಂದ ದೂರ​ವಿ​ರ​ಲು ‘ಸ್ಮಾರ್ಟ್‌ ರಿಂಗ್‌’ ಮೊರೆ ಹೋದ ಮುಂಬೈ ತಂಡ

ಕೋವಿಡ್ 19 ವಿರುದ್ಧ ಹೋರಾಡಲು  ಮುಂಬೈ ಇಂಡಿ​ಯನ್ಸ್‌ ತಂಡ, ತನ್ನ ಆಟ​ಗಾ​ರ​ರು, ಸಹಾ​ಯಕ ಸಿಬ್ಬಂದಿ ಸೇರಿ​ದಂತೆ ತಂಡದ ಪ್ರತಿ​ಯೊಬ್ಬ ಸದ​ಸ್ಯ​ರಿ​ಗೂ ‘ಸ್ಮಾರ್ಟ್‌ ರಿಂಗ್‌’ ವಿತ​ರಿ​ಸಿದೆ.

Mumbai Indians Introduce NBA Style smart Ring to Track Vital stats
Author
Bengaluru, First Published Sep 6, 2020, 9:11 AM IST

ದುಬೈ (ಸೆ. 06):  ಕೊರೋನಾ ಸೋಂಕಿನ ಭೀತಿ ನಡುವೆಯೇ ಐಪಿ​ಎಲ್‌ ಆಯೋ​ಜಿ​ಸಿ​ರುವ ಬಿಸಿ​ಸಿಐ, ಟೂರ್ನಿ​ಯಲ್ಲಿ ಆಡ​ಲಿ​ರುವ ಎಲ್ಲಾ ಆಟ​ಗಾ​ರರು, ಸಹಾ​ಯಕ ಸಿಬ್ಬಂದಿ ಬಯೋ ಸೆಕ್ಯೂರ್‌ ವಾತಾ​ವ​ರಣದಲ್ಲೇ ಇರ​ಬೇಕು ಎನ್ನುವ ಷರತ್ತು ವಿಧಿ​ಸಿದೆ.

ಜೊತೆಗೆ ಜಿಪಿಎಸ್‌ ಆಧಾ​ರಿತ ಸಾಧನವೊಂದನ್ನು ನೀಡಿದ್ದು, ಬಯೋ ಸೆಕ್ಯೂರ್‌ ವಾತಾ​ವ​ರಣದಿಂದ ಹೊರ​ಹೋ​ದರೆ ಆ ಸಾಧನ ಎಚ್ಚ​ರಿ​ಸ​ಲಿದೆ. ಕೊರೋನಾದಿಂದ ದೂರವಿರುವ ಉದ್ದೇ​ಶ​ದಿಂದ ಒಂದು ಹೆಜ್ಜೆ ಮುಂದೆ ಹೋಗಿ​ರುವ ಮುಂಬೈ ಇಂಡಿ​ಯನ್ಸ್‌ ತಂಡ, ತನ್ನ ಆಟ​ಗಾ​ರ​ರು, ಸಹಾ​ಯಕ ಸಿಬ್ಬಂದಿ ಸೇರಿ​ದಂತೆ ತಂಡದ ಪ್ರತಿ​ಯೊಬ್ಬ ಸದ​ಸ್ಯ​ರಿ​ಗೂ ‘ಸ್ಮಾರ್ಟ್‌ ರಿಂಗ್‌’ ವಿತ​ರಿ​ಸಿದೆ.

ಇದನ್ನು ಧರಿ​ಸುವ ಮೂಲಕ ಎದೆಬಡಿತ, ಉಸಿ​ರಾಟದಲ್ಲಿ ಏರು​ಪೇರು, ದೇಹದ ತಾಪಮಾನವನ್ನು ತಿಳಿ​ಯ​ಬ​ಹು​ದಾ​ಗಿದೆ. ಆರೋ​ಗ್ಯ​ದ​ಲ್ಲಿ ಸಣ್ಣ ಸಮಸ್ಯೆಯಾದರೂ ತಕ್ಷಣ ಚಿಕಿತ್ಸೆ ನೀಡಲು ಈ ರಿಂಗ್‌ ಸಹ​ಕಾ​ರಿ​ಯಾ​ಗ​ಲಿದೆ. ಅಮೆ​ರಿ​ಕದ ಎನ್‌ಬಿಎ ಬಾಸ್ಕೆಟ್‌ಬಾಲ್‌ ಟೂರ್ನಿ​ಯಲ್ಲಿ ಇದೇ ರೀತಿಯ ತಂತ್ರ​ಜ್ಞಾ​ನ​ವನ್ನು ಬಳ​ಸ​ಲಾ​ಗು​ತ್ತಿದೆ.

Follow Us:
Download App:
  • android
  • ios