Asianet Suvarna News Asianet Suvarna News

'2019ರ ವಿಶ್ವಕಪ್ ಆಡ್ತಾರೆ ಎಂ.ಎಸ್ ಧೋನಿ'

ಕಳಪೆ ಫಾರ್ಮ್‌ನಲ್ಲಿರುವ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ 2019ರ ವಿಶ್ವಕಪ್ ಆಡ್ತಾರ? ಟೀಂ ಇಂಡಿಯಾ ಆಯ್ಕೆ ಸಮಿತಿ ಹೇಳೇದೇನು? ಮುಂಬರುವ ವಿಶ್ವಕಪ್ ಕುರಿತು ಧೋನಿ ಮನದಲ್ಲೇನಿದೆ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
 

MS Dhoni will paly 2019 World cup Cricket says manger Arun pandey
Author
Bengaluru, First Published Nov 15, 2018, 5:27 PM IST

ಮುಂಬೈ(ನ.15): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ 2019ರ ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಕಳೆದ ಕೆಲ ಸರಣಿಗಳಲ್ಲಿ ಧೋನಿ ಬ್ಯಾಟಿಂಗ್ ವೈಫಲ್ಯ ಭಾರಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಧೋನಿ 20119ರ ವಿಶ್ವಕಪ್ ಆಡ್ತಾರ ಅನ್ನೋದು ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು. ಆದರೆ ಇದೀಗ ಧೋನಿ 2019ರ ವಿಶ್ವಕಪ್ ಆಡಲಿದ್ದಾರೆ ಎಂದು ಧೋನಿ ಮ್ಯಾನೇಜರ್ ಅರುಣ್ ಪಾಂಡೆ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ದ ಟಿ20 ಸರಣಿಯಿಂದ ಧೋನಿಗೆ ವಿಶ್ರಾಂತಿ ನೀಡಿದಾಗ, ಧೋನಿ ಕರಿಯರ್ ಅಂತ್ಯಗೊಂಡಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಧೋನಿ 2019ರ ವಿಶ್ವಕಪ್ ಆಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಧೋನಿ ಮುಂಬರುವ ವಿಶ್ವಕಪ್ ಆಡೋ ಕನಸು ಹೊತ್ತಿದ್ದಾರೆ ಎಂದು ಅರುಣ್ ಪಾಂಡೆ ಹೇಳಿದ್ದಾರೆ.

2018ರಲ್ಲಿ ಎಂ.ಎಸ್.ಧೋನಿ ಒಂದೇ ಒಂದು ಹಾಫ್ ಸೆಂಚುರಿ ಸಿಡಿಲಿಲ್ಲ. ಹೀಗಾಗಿ ಧೋನಿ ಫಾರ್ಮ್ ಸಮಸ್ಯ ಆಯ್ಕೆ ಸಮಿತಿಗೆ ತಲೆನೋವಾಗಿದೆ. ಆದರೆ ಹಿರಿಯ  ಕ್ರಿಕೆಟಿಗನ ಉಪಸ್ಥಿತಿ ತಂಡಕ್ಕೆ ಅನಿವಾರ್ಯವಾಗಿದೆ. ಇಷ್ಟೇ ಅಲ್ಲ 2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ತಂಡದ ವಿಕೆಟ್ ಕೀಪರ್ ಎಂದು ಆಯ್ಕೆ ಸಮತಿ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್ ಈಗಾಗಲೇ ಹೇಳಿದ್ದಾರೆ. ಇದೀಗ ಅರುಣ್ ಪಾಂಡೆ ಹೇಳಿಕೆ ಅಭಿಮಾನಿಗಳಲ್ಲಿ ಸಮಾಧಾನ ತಂದಿದೆ.
 

Follow Us:
Download App:
  • android
  • ios