ಭಾರತ-ಇಂಗ್ಲೆಂಡ್ ಏಕದಿನ: ಐತಿಹಾಸಿಕ ದಾಖಲೆಗೆ ಸಜ್ಜಾದ ಎಂ ಎಸ್ ಧೋನಿ

First Published 11, Jul 2018, 8:29 PM IST
MS Dhoni Set To Join Tendulkar Ganguly Dravid In This Elite Club
Highlights

ಇಂಗ್ಲೆಂಡ್ ವಿರುದ್ಧದ 3 ಟಿ20 ಪಂದ್ಯದಲ್ಲಿ ದಾಖಲೆ ಬರೆದ ಎಂ ಎಸ್ ಧೋನಿ ಇದೀಗ ಏಕದಿನ ಸರಣಿಯಲ್ಲಿ ಐತಿಹಾಸಿಕ ದಾಖಲೆಗೆ ಸಜ್ಜಾಗಿದೆ. ಹಾಗಾದರೆ ಮೊದಲ ಏಕದಿನ ಪಂದ್ಯದಲ್ಲಿ ಎಂ ಎಸ್ ಧೋನಿ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿವರ.

ಟ್ರೆಂಟ್ ಬ್ರಿಡ್ಜ್(ಜು.11): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯಕ್ಕೆ ಅಖಾಡ ರೆಡಿಯಾಗಿದೆ. ಆಂಗ್ಲರ ವಿರುದ್ಧದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯಲ್ಲಿ ಶುಬಾರಂಭ ಮಾಡೋ ವಿಶ್ವಾಸದಲ್ಲಿದೆ. ವಿಶೇಷ ಅಂದರೆ ಮೊದಲ ಏಕದಿನ ಪಂದ್ಯದಲ್ಲೇ ಎಂ ಎಸ್ ಧೋನಿ ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ನಾಳೆಯಿಂದ(ಜು.12) ಆರಂಭಗೊಳ್ಳಲಿದೆ. ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಎಂ ಎಸ್ ಧೋನಿ 10,000 ರನ್ ಪೂರೈಸೋ ವಿಶ್ವಾಸದಲ್ಲಿದ್ದಾರೆ.

ಎಂ ಎಸ್ ಧೋನಿ ಏಕದಿನ ಕ್ರಿಕೆಟ್‌ನಲ್ಲಿ 318 ಪಂದ್ಯಗಳಿಂದ 9967 ರನ್ ದಾಖಲಿಸಿದ್ದಾರೆ. ಇದೀಗ 10ಸಾವಿರ ರನ್‌ಗಳಿಗೆ ಧೋನಿಗಿನ್ನು 33ರನ್‌ಗಳ ಅವಶ್ಯಕತೆ ಇದೆ. ಮೊದಲ ಪಂದ್ಯದಲ್ಲೇ ಧೋನಿ ಈ ಸಾಧನೆ ಮಾಡಿದರೆ, 10 ಸಾವಿರ ರನ್ ಸಿಡಿಸಿದ ಭಾರತದ ದಿಗ್ಗಜ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಎಲೈಟ್ ಕ್ಲಬ್‌ಗೆ ಸೇರಲಿದ್ದಾರೆ.

ಧೋನಿ 10ಸಾವಿರ ರನ್ ಸಾಧನೆ ಮಾಡಿದರೆ, ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 12ನೇ ಕ್ರಿಕೆಟಿಗ ಹಾಗೂ ವಿಶ್ವದ 2ನೇ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ.

 

loader