ರಾಂಚಿ(ಆ.24): ಇಂಗ್ಲೆಂಡ್ ವಿರುದ್ಧ ನಿಗಧಿತ ಓವರ್ ಕ್ರಿಕೆಟ್ ಬಳಿಕ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಸಿಕ್ಕಿರೋ ಸಮಯದಲ್ಲಿ ತಮ್ಮ ಮುದ್ದಿನ ನಾಯಿ ಜೊತೆ ಆಟವಾಡಿದ್ದಾರೆ.

 

 
 
 
 
 
 
 
 
 
 
 
 
 

A bit of hugging,training, catching practice and getting unconditional love in return.priceless

A post shared by M S Dhoni (@mahi7781) on Aug 24, 2018 at 12:41am PDT

 

ಎಂ ಎಸ್ ಧೋನಿಗೆ ನಾಯಿ ಅಂದರೆ ತುಂಬಾ ಪ್ರೀತಿ. ಹೀಗಾಗಿ ಮನೆಯಲ್ಲಿ ಹಲವಾರು ನಾಯಿಗಳನ್ನ ಸಾಕಿದ್ದಾರೆ. ಇನ್ನು ಮೈದಾನದಲ್ಲಿ ಪೊಲೀಸ್ ನಾಯಿ ಕಂಡರೂ ಮುದ್ದಾಡುತ್ತಾರೆ. ಇದೀಗ ತಮ್ಮ ಮನೆಯ ಮುದ್ದಿನ ನಾಯಿಗಳ ಜೊತೆ ಧೋನಿ ಟೆನಿಸ್ ಬಾಲ್ ಆಟ ಆಡಿದ್ದಾರೆ.

ರಾಂಚಿಯಲ್ಲಿರೋ ತಮ್ಮ ಮನೆಯಲ್ಲಿ ಧೋನಿ, ಸಾಕು ನಾಯಿಗಳ ಜೊತೆ ಆಟವಾಡಿ ಗಮನಸೆಳೆದಿದ್ದಾರೆ. ಧೋನಿಯ ವೀಡಿಯೋ ಇದೀಗ ವೈರಲ್ ಆಗಿದೆ. ಇತ್ತೀಚೆಗಷ್ಟೇ ಪುತ್ರಿ ಝಿವಾ ಧೋನಿ ಜೊತೆಗಿನ ವೀಡಿಯೋ ಭಾರಿ ಸದ್ದು ಮಾಡಿತ್ತು.

 

 
 
 
 
 
 
 
 
 
 
 
 
 

Very smart

A post shared by M S Dhoni (@mahi7781) on Aug 21, 2018 at 3:28am PDT

 

ಝಿವಾ ಧೋನಿ ಜೊತೆಗಿನ ವೀಡಿಯೋ ಬಳಿಕ ಇದೀಗ ನಾಯಿ ಜೊತೆಗೆ ಧೋನಿ ಟೆನಿಸ್ ಚೆಂಡಿನ ಮೂಲಕ ಆಟವಾಡಿದ್ದಾರೆ.