ಎಂ ಎಸ್ ಧೋನಿ ಈಗಲೂ ಟೀಂ ಇಂಡಿಯಾ ಅಧಿಕೃತ ನಾಯಕ!

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 19, Jul 2018, 4:22 PM IST
MS Dhoni is still the Indian captain on BCCI’s official website
Highlights

ಎಂ ಎಸ್ ಧೋನಿ ನಿಗಧಿತ ಓವರ್ ಕ್ರಿಕೆಟ್ ನಾಯಕತ್ವಕ್ಕೆ 2017ರಲ್ಲೇ ರಾಜಿನಾಮೆ ನೀಡಿದ್ದಾರೆ. ಆದರೆ ಅಭಿಮಾನಿಗಳ ಪಾಲಿಗೆ ಮಾತ್ರವಲ್ಲ, ಬಿಸಿಸಿಐಗೂ ಎಂ ಎಸ್ ಧೋನಿಯೇ ನಾಯಕ. ನಿವೃತ್ತಿ ಬಳಿಕ ಧೋನಿ ನಾಯಕನಾಗಿದ್ದು ಹೇಗೆ? ಇಲ್ಲಿದೆ ವಿವರ.

ಮುಂಬೈ(ಜು.19): ಎಂ ಎಸ್ ಧೋನಿ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿನ ನಾಯಕ. 2007ರ ಟಿ20 ವಿಶ್ವಕಪ್, 2011ರ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಧೋನಿ ಹಲವು ಸರಣಿ ಗೆದ್ದಿದ್ದಾರೆ. ಅಭಿಮಾನಿಗಳಿಗೂ ಕೂಡ ಧೋನಿ ನೆಚ್ಚಿನ ನಾಯಕ.

ಎಂ ಎಸ್ ಧೋನಿ 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೆ, 2017ರಲ್ಲಿ ಏಕದಿನ ಹಾಗೂ ಟಿ20 ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಬಳಿಕ ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನ ಮುನ್ನಡೆಸುತ್ತಿದ್ದಾರೆ. ಆದರೆ ಅಧೀಕೃತವಾಗಿ ಎಂ ಎಸ್ ಧೋನಿ ಈಗಲೂ ಟೀಂ ಇಂಡಿಯಾ ನಾಯಕ.

ಬಿಸಿಸಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ಎಂ ಎಸ್ ಧೋನಿಯನ್ನ ಟೀಂ ಇಂಡಿಯಾ ನಾಯಕ ಎಂದೇ ನಮೂದಿಸಲಾಗಿದೆ. ಪ್ಲೇಯರ್ ಪ್ರೊಫೈಲ್‌ನಲ್ಲಿ ಎಂ ಎಸ್ ಧೋನಿ, ಟೀಂ ಇಂಡಿಯಾ ನಾಯಕ ಎಂದು ದಾಖಲಿಸಿದ್ದಾರೆ. 

ಧೋನಿ ನಾಯಕ ಸ್ಥಾನದಿಂದ ನಿವೃತ್ತಿ ಹೊಂದಿದ್ದರೂ, ಮೈದಾನದಲ್ಲಿ ಕೊಹ್ಲಿಯ ಪ್ರಮುಖ ನಿರ್ಧಾರಗಳ ಹಿಂದೆ ಧೋನಿ ಪಾತ್ರವಿರುತ್ತೆ.ಕಾರಣ ಪಂದ್ಯವನ್ನ ಧೋನಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಆಟಗಾರ ಸದ್ಯ ಟೀಂ ಇಂಡಿಯಾದಲ್ಲಿ ಯಾರು ಇಲ್ಲ. ಇನ್ನು ಅಭಿಮಾನಿಗಳ ಪಾಲಿಗೂ ಎಂ ಎಸ್ ಧೋನಿ ಈಗಲೂ ನಾಯಕ. 

loader