ಮಂಡಳಿಯಿಂದ ಬೇಸತ್ತು ನಿವೃತ್ತಿ ನಿರ್ಧಾರ ಮಾಡಿದ ಪಾಕ್ ಸ್ಟಾರ್ ಕ್ರಿಕೆಟಿಗ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 5:31 PM IST
Mohammad Hafeez thinking over quitting international career
Highlights

ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಬೇಸತ್ತಿರುವ ಹಿರಿಯ ಹಾಗೂ ಸ್ಟಾರ್ ಕ್ರಿಕೆಟಿಗ ಇದೀಗ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ವಿದಾಯಕ್ಕೆ ಸಜ್ಜಾದ ಸ್ಟಾರ್ ಕ್ರಿಕೆಟಿಗ ಯಾರು? ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ

ಲಾಹೋರ್(ಆ.07): ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ(ಪಿಸಿಬಿ) ಬೇಸತ್ತಿರುವ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಇದೀಗ ವಿದಾಯ ಹೇಳಲು ಮುಂದಾಗಿದ್ದಾರೆ. ಪಿಸಿಬಿ ಬಿಡುಗಡೆ ಮಾಡಿರುವ ನೂತನ ವಾರ್ಷಿಕ ಒಪ್ಪಂದ ಸರಿಯಾಗಿಲ್ಲ ಎಂದಿರುವ ಹಫೀಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.

ಪಿಸಿಬಿ ಬಿಡುಗಡೆ ಮಾಡಿರು ನೂತನ ಒಪ್ಪಂದದ ಪಟ್ಟಿಯಲ್ಲಿ ಮೊಹಮ್ಮದ್ ಹಫೀಜ್‌ಗೆ ಬಿ ಕೆಟಗರಿ ನೀಡಲಾಗಿದೆ. ಎ ಕೆಟಗರಿ ಬದಲು ಬಿ ಕೆಟರಿ ನೀಡಿದ್ದಾರೆ ಎಂದು ಬೇಸತ್ತಿರುವ ಹಫೀಜ್ ನಿವೃತ್ತಿ ಹೇಳೋದಾಗಿ ಎಚ್ಚರಿಸಿದ್ದಾರೆ.

3 ವರ್ಷಗಳ ಒಪ್ಪಂದ ಬಿಡುಗಡೆ ಮಾಡಿರುವ ಪಿಸಿಬಿ, ಎ ಕೆಟಗರಿಯ ಆಟಗಾರರಿಗೆ ಶೇಕಡಾ 25 ರಿಂದ 30 ರಷ್ಟು ವೇತನ ಹೆಚ್ಚಳ ಮಾಡು ನಿರ್ಧರಿಸಿದೆ. ನಾಯಕ ಸರ್ಫರಾಜ್ ಖಾನ್, ಶೋಯಿಬ್ ಮಲ್ಲಿಕ್, ಅಝರ್ ಆಲಿ, ಯಾಸಿರ್ ಶಾ, ಬಾಬರ್ ಅಝಮ್ ಹಾಗೂ ಮೊಹಮ್ಮದ್ ಅಮೀರ್ ಎ ಕೆಟಗೆರಿ ನೀಡಲಾಗಿದೆ.

ಮೊಹಮ್ಮದ್ ಹಫೀಜ್ ಹಾಗೂ ಅಸಾದ್ ಶಫೀಕ್‌ಗೆ ಬಿ ಕೆಟಗೆರಿ ನೀಡಲಾಗಿದೆ. ಹೀಗಾಗಿ ಹಫೀಜ್ ವಿದಾಯಕ್ಕೆ ಮುಂದಾಗಿದ್ದಾರೆ.  ಆದರೆ ಈ ಕುರಿತು ಇನ್ನು ಅಂತಿಮ ನಿರ್ಧಾರ ಕೈಗೊಂಡಿಲ್ಲ.  ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಂದ ಪರಿಷ್ಕರಣೆ ಮಾಡಿದರೆ, ತಮ್ಮ ನಿರ್ಧಾರ ಬದಲಾಯಿಸೋದಾಗಿ ಹೇಳಿದ್ದಾರೆ.

loader