ಪಾಕಿಸ್ತಾನದ ಮೊಹಮ್ಮದ್ ಹಫೀಜ್ ನೆಚ್ಚಿನ ಭಾರತೀಯ ಕ್ರಿಕೆಟಿಗ ಯಾರು?

First Published 26, Jul 2018, 2:02 PM IST
Mohammad Hafeez names his all-time favorite Indian cricketer
Highlights

ಅಭಿಮಾನಿ ಕೇಳಿದ ನೆಚ್ಚಿನ ಕ್ರಿಕೆಟಿ ಪ್ರಶ್ನೆಗೆ ಪಾಕಿಸ್ತಾನ ಆಲ್ರೌಂಡರ್ ಮೊಹಮ್ಮದ್ ಉತ್ತರಿಸಿದ್ದಾರೆ. ಈ ಮೂಲಕ  ಹಫೀಜ್ ನೆಚ್ಚಿನ ಕ್ರಿಕೆಟಿಗ ಯಾರು ಅನ್ನೋದು ಬಹಿರಂಗವಾಗಿದೆ. ಹಾಗಾದರೆ ಹಫೀಜ್ ಫೇವರಿಟ್ ಕ್ರಿಕೆಟರ್ ಯಾರು? ಇಲ್ಲಿದೆ ವಿವರ.

ಲಾಹೋರ್(ಜು.26): ಪಾಕಿಸ್ತಾನ ಆಲ್ರೌಂಡರ್  ಮೊಹಮ್ಮದ್ ಹಫೀಜ್ ತಮ್ಮ ನೆಚ್ಚಿನ ಭಾರತದ ಕ್ರಿಕೆಟಿಗ ಯಾರು ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ. ಮೊಹಮ್ಮದ್ ಹಫೀಜ್ ನೆಚ್ಚಿನ ಕ್ರಿಕೆಟಿಗ ಬೇರೆ ಯಾರು ಅಲ್ಲ ನಮ್ಮ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಮೊಹಮ್ಮದ್ ಹಫೀಜ್ ಈ ವಿಚಾರ ಬಹಿಂಗ ಪಡಿಸಿದ್ದಾರೆ. ಭಾರತದ  ಆಲ್ ಟೈಮ್ ಫೇವರಿಟ್ ಕ್ರಿಕೆಟಿಗ ದಿಗ್ಗಜ ಸಚಿನ್ ತೆಂಡೂಲ್ಕರ್ ಎಂದು ಟ್ವೀಟ್ ಮಾಡಿದ್ದಾರೆ.

 

 

ಪಾಕಿಸ್ತಾನ ಕ್ರಿಕೆಟಿಗರಲ್ಲಿ ಮೊಹಮ್ಮದ್ ಹಫೀಜ್ ನೆಚ್ಚಿನ ಕ್ರಿಕೆಟಿಗ  ಸಯೀದ್ ಅನ್ವರ್ ಹಾಗೂ ಇಮ್ಜಾಮ್ ಉಲ್ ಹಕ್ ಫೇವರಿಟ್ ಕ್ರಿಕೆಟರ್ಸ್ ಎಂದಿದ್ದಾರೆ. ಇತ್ತೀಚೆಗಿನ ಜಿಂಬಾಬ್ವೆ ವಿರುದ್ಧದ ಸರಣಿ ಬಳಿಕ ಮೊಹಮ್ಮದ್ ಹಫೀಜ್ ಟ್ವಿಟರ್ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು.

 

 

loader