ಮಿಯಾಮಿ ಓಪನ್ ಟೆನಿಸ್ ಟೂರ್ನಿ: ಬೋಪಣ್ಣ-ಎಬ್ಡೆನ್ ಫೈನಲ್‌ಗೆ
ಗುರುವಾರ ರಾತ್ರಿ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಇಂಡೋ-ಆಸೀಸ್ ಜೋಡಿ, ಸ್ಪೇನ್‌ನ ಗ್ರಾನೊಲೆರ್ಸ್ ಹಾಗೂ ಅರ್ಜೆಂಟೀನಾದ ಜೆಬಲ್ಲೊಸ್ ವಿರುದ್ಧ 6-1, 6-4 ಅಂತರದಲ್ಲಿ ಗೆಲುವು ಸಾಧಿಸಿತು.
ಫ್ಲೋರಿಡಾ(ಅಮೆರಿಕ): ಭಾರತದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಮಿಯಾಮಿ ಓಪನ್ ಎಟಿಪಿ 1000 ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಎಲ್ಲಾ 9 ಎಟಿಪಿ ಮಾಸ್ಟರ್ಸ್ ಟೂರ್ನಿಗಳಲ್ಲಿ ಫೈನಲ್‌ಗೇರಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಬೋಪಣ್ಣ ಪಾತ್ರರಾದರು. ಲಿಯಾಂಡರ್ ಪೇಸ್ ಈ ಸಾಧನೆ ಮಾಡಿದ ಮೊದಲಿಗರು.
ಗುರುವಾರ ರಾತ್ರಿ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಇಂಡೋ-ಆಸೀಸ್ ಜೋಡಿ, ಸ್ಪೇನ್‌ನ ಗ್ರಾನೊಲೆರ್ಸ್ ಹಾಗೂ ಅರ್ಜೆಂಟೀನಾದ ಜೆಬಲ್ಲೊಸ್ ವಿರುದ್ಧ 6-1, 6-4 ಅಂತರದಲ್ಲಿ ಗೆಲುವು ಸಾಧಿಸಿತು.
IPL 2024 ಪಂಜಾಬ್ ಕಿಂಗ್ಸ್ ಸವಾಲಿಗೆ ಲಖನೌ ಸೂಪರ್ ಜೈಂಟ್ಸ್ ರೆಡಿ
ಹಾಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಚಾಂಪಿಯನ್ ಬೋಪಣ್ಣ-ಎಬ್ಡೆನ್ ಶನಿವಾರ ಫೈನಲ್‌ನಲ್ಲಿ ಕ್ರೊವೇಷಿಯಾದ ಇವಾನ್ ಡೊಡಿಗ್-ಅಮೆರಿಕದ ಆಸ್ಟಿನ್ ಕ್ರಾಜಿಕೆಕ್ ವಿರುದ್ಧ ಸೆಣಸಲಿದ್ದಾರೆ. ಬೋಪಣ್ಣಗೆ ಇದು ಮಿಯಾಮಿ ಓಪನ್‌ನಲ್ಲಿ ಮೊದಲ, ಒಟ್ಟಾರೆ 14ನೇ ಎಟಿಪಿ ಮಾಸ್ಟರ್ಸ್ 1000 ಫೈನಲ್ ಆಗಿದೆ.
ಮ್ಯಾಡ್ರಿಡ್ ಮಾಸ್ಟರ್ಸ್: ಪಿ.ವಿ.ಸಿಂಧುಗೆ ಸೋಲು
ಮ್ಯಾಡ್ರಿಡ್: ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಮ್ಯಾಡ್ರಿಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಸುಪನಿದಾ ವಿರುದ್ಧ 24-26, 21-17, 22-20ರಲ್ಲಿ ಸೋಲುಮಡರು. ಇದೇ ವೇಳೆ ಸಿಕ್ಕಿ ರೆಡ್ಡಿ-ಸುಮಿತ್ ರೆಡ್ಡಿ ದಂಪತಿ ಮಿಶ್ರ ಡಬಲ್ಸ್ ಸೆಮೀಸ್‌ಗೇರಿತು.
RCB ಏನನ್ನೂ ಗೆದ್ದಿಲ್ಲ ಆದ್ರೆ ಎಲ್ಲವನ್ನೂ ಗೆದ್ದಂತೆ ವರ್ತಿಸುತ್ತಾರೆ: ಗೌತಮ್ ಗಂಭೀರ್
ಎಲೈಟ್ ಪ್ಯಾನೆಲ್‌ನಲ್ಲೇ ಉಳಿದ ಅಂಪೈರ್ ನಿತಿನ್
ದುಬೈ: ಭಾರತದ ಅಂಪೈರ್ ನಿತಿನ್ ಮೆನನ್ ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿ ಸತತ 5ನೇ ವರ್ಷವೂ ಮುಂದುವರಿಯಲಿದ್ದಾರೆ. ಇಂದೋರ್ ಮೂಲದ ನಿತಿನ್, 2020ರಲ್ಲಿ ಎಲೈಟ್ ಪ್ಯಾನೆಲ್‌ಗೆ ಸೇರ್ಪಡೆಗೊಂಡಿದ್ದರು. 12 ಉತ್ಕೃಷ್ಟ ಮಟ್ಟದ ಅಂಪೈರ್‌ಗಳಿರುವ ಈ ಪಟ್ಟಿಯಲ್ಲಿ ನಿತಿನ್ ಏಕೈಕ ಭಾರತೀಯ. ಈ ಮೊದಲು ಭಾರತದ ಎಸ್.ವೆಂಕಟರಾಘವನ್ ಹಾಗೂ ಎಸ್.ರವಿ ಅವರಿಗೆ ಈ ಗೌರವ ದೊರೆತಿತ್ತು.