ಮುಂಬೈ(ಜ.03): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ನಿನ್ನೆ(ಜ.02) ದಾದರ್‌ನ ಶಿವಾಜಿ ಪಾರ್ಕ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ಅಚ್ರೇಕರ್ ಅಂತ್ಯಕ್ರೀಯ ಇಂದು ನಡೆದಿದೆ. ಅಚ್ರೇಕರ್ ಪಾರ್ಥೀವ ಶರೀರವನ್ನ ಅಂತ್ಯಕ್ರೀಯೆಗೆ ಕೊಂಡೊಯ್ಯುವ ವೇಳೆ ಸಚಿನ್ ತೆಂಡೂಲ್ಕರ್ ಹೆಗಲು ನೀಡಿದರು.

ಇದನ್ನೂ ಓದಿ: ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಪ್ರೀತಿಯ ಗುರು ಇನ್ನಿಲ್ಲ

ಗುರುವಿನ ಅಗಲಿಕೆಯ ನೋವಿನಿಂದ ಸಚಿನ್ ತೆಂಡೂಲ್ಕರ ಮೌನಿಯಾಗಿದ್ದರು. ಅಂತ್ಯಕ್ರೀಯೆ ವೇಳೆ ಕುಟುಂಬದ ಜೊತೆಗಿದ್ದ ಸಚಿನ್ ಸಂಪೂರ್ಣ ಉಸ್ತುವಾರಿ ನೋಡಿಕೊಂಡರು. ಸಚಿನ್ ತೆಂಡೂಲ್ಕರ್‌ಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಅಚ್ರೇಕರ್, ವಿಶ್ವದ ದಿಗ್ಗಜ ಬ್ಯಾಟ್ಸ್‌ಮನ್ ಆಗಿ ರೂಪುಗೊಳಿಸಿದರು.

ಇದನ್ನೂ ಓದಿ: ಹರಾಜಿನ ಬಳಿಕ ಒಂದಾದ ಗುರು-ಶಿಷ್ಯರು..! ತೆಂಡುಲ್ಕರ್ ಟ್ವೀಟ್ ಅಪ್ಪಟ ಬಂಗಾರ​​​​​​​

ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಸೇರಿದಂತೆ ಹಲವು ಟೀಂ ಇಂಡಿಯಾ ಕ್ರಿಕೆಟಿಗರಿಗೆ ರಮಾಕಾಂತ್ ಅಚ್ರೇಕರ್ ಗುರುವಾಗಿದ್ದರು. ಸಚಿನ್ ದಿಗ್ಗಜ ಬ್ಯಾಟ್ಸ್‌ಮನ್ ಆದರೂ  ಪ್ರತಿ ವರ್ಷ ಗುರು ಪೂರ್ಣಿಮಾ ದಿನ ಗುರುವಿನ ಆಶೀರ್ವಾದ ಪಡೆಯುತ್ತಿದ್ದರು.