Asianet Suvarna News Asianet Suvarna News

ಕ್ರಿಕೆಟ್ ಕಾಶಿಯಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಕೇವಲ 4 ದಿನಕ್ಕೆ ಮುಕ್ತಾಯಗೊಂಡಿದೆ. ಮೊದಲ ದಿನ ಮಳೆಗೆ ಆಹುತಿಯಾಗಿದ್ದರೆ, ಇನ್ನುಳಿದ  3 ದಿನದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿದೆ. ಲಾರ್ಡ್ಸ್ ಟೈಸ್ಟ್ ಪಂದ್ಯ ಹೈಲೈಟ್ಸ್ ಇಲ್ಲಿದೆ.

lords test england 2-0 lead in 5 match series
Author
Bengaluru, First Published Aug 12, 2018, 10:21 PM IST

ಲಾರ್ಡ್ಸ್(ಆ.12): ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಹೊರಟ್ಟಿದ್ದ ಟೀಂ ಇಂಡಿಯಾ 2ನೇ ಪಂದ್ಯದಲ್ಲೂ ಮುಗ್ಗರಿಸಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 159 ರನ್ ಸೋಲು ಅನುಭವಿಸಿದೆ. ಈ ಮೂಲಕ  5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 0-2 ಹಿನ್ನಡೆ ಅನುಭವಿಸಿದೆ.

 

 

289 ರನ್ ಹಿನ್ನಡೆಯೊಂದಿದೆ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಮುರಳಿ ವಿಜಯ್ ಶೂನ್ಯ ಸುತ್ತಿದರೆ, ಕೆಎಲ್ ರಾಹುಲ್ 10 ರನ್‌ಗಳಿಸಿ ಔಟಾಗಿದ್ದರು.

ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ತಂಡಕ್ಕೆ ಆಸರೆಯಾಗಿದ್ದರು. 33 ಎಸೆತ ಎದುರಿಸಿ ಹೋರಾಟ ನೀಡೋ ಸೂಚನೆ ನೀಡಿದ ರಹಾನೆ ಸ್ಕೋರ್ 13 ದಾಟಲಿಲ್ಲ. 35 ರನ್‌ಗಳಿಸುವಷ್ಟರಲ್ಲೇ ಭಾರತ 3ನೇ ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾವನ್ನ ಕಾಪಾಡಬೇಕಾದ ಜವಾಬ್ದಾರಿ  ಚೇತೇಶ್ವರ್ ಪೂಜಾರ 17 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರೂ 17 ರನ್ ದಾಟಲಿಲ್ಲ. ಇನ್ನು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮರೆತೇ ಬಿಟ್ಟಿದ್ದಾರೆ. ಕಾರ್ತಿಕ್ ಡಕೌಟ್ ಆಗಿ ಪೆವಿಲಿಯನ್ ಸೇರಿದರು. 

ಹಾರ್ದಿಕ್ ಪಾಂಡ್ಯ ಹಾಗೂ ಆರ್ ಅಶ್ವಿನ್  ಅಲ್ಪ ಹೋರಾಟ ನೀಡಿದರು. ಆದರೆ ಪಾಂಡ್ಯ 26 ರನ್ ಸಿಡಿಸಿ ನಿರ್ಗಮಿಸೋ ಮೂಲಕ ಮತ್ತೆ ಕುಸಿತ ಕಂಡಿತು. ಕುಲದೀಪ್ ಯಾದವ್ ಶೂನ್ಯ ಸುತ್ತಿದರು.  ಆರ್ ಅಶ್ವಿನ್ ಅಜೇಯ 33 ರನ್ ಸಿಡಿಸಿದರೆ, ಇಶಾಂತ್ ಶರ್ಮಾ ವಿಕೆಟ್ ಪತನದೊಂದಿಗೆ ಭಾರತ 130 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 159 ರನ್ ಸೋಲು ಅನುಭವಿಸಿತು. ಜೊತೆಗೆ ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 107 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 396 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ 286 ರನ್ ಮುನ್ನಡೆ  ಸಾಧಿಸಿತ್ತು.

Follow Us:
Download App:
  • android
  • ios