ದುಬೈ(ನ.12): ಭಾರತ -ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಮುಗಿದ ಬೆನ್ನಲ್ಲೇ, ಟಿ20 ರ‍್ಯಾಂಕಿಂಗ್‌ ಪ್ರಕಟಗೊಂಡಿದೆ. ವಿಂಡೀಸ್ ವಿರುದ್ದದ ಚುಟುಕು ಸರಣಿಯ 2 ಪಂದ್ಯದಿಂದ 5 ವಿಕೆಟ್ ಕಬಳಿಸಿದ ಸ್ಪಿನ್ನರ್ ಕುಲ್ದೀಪ್ ಯಾದವ್ ರ‍್ಯಾಂಕಿಂಗ್‌‌ನಲ್ಲಿ 14 ಸ್ಥಾನ ಬಡ್ತಿ ಪಡೆದಿದ್ದಾರೆ. 

 

 

ಕುಲ್ದೀಪ್ ಯಾದವ್ 23ನೇ ಸ್ಥಾನ ಪಡೆದುಕೊಂಡಿದ್ದರೆ, ಭುವನೇಶ್ವರ್ ಕುಮಾರ್ 20ನೇ ಸ್ಥಾನ ಅಲಂಕರಿಸಿದ್ದರೆ, ಜಸ್‌ಪ್ರೀತ್ ಬುಮ್ರಾ 21ನೇ ಸ್ಥಾನ ಪಡೆದಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಏಕೈಕ  ಭಾರತೀಯ ಸ್ಥಾನ ಪಡೆದಿದ್ದಾರೆ.  ಯಜುವೇಂದ್ರ ಚಹಾಲ್ ಟಿ20 ಬೌಲಿಂಗ್ ರ‍್ಯಾಂಕಿಂಗ್‌‌ನಲ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಟಿ20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮೊದಲ ಸ್ಥಾನದಲ್ಲಿದ್ದರೆ, ಭಾರತದ ಕೆಲಎಲ್ ರಾಹುಲ್ 4ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ರೋಹಿತ್ ಶರ್ಮಾ 7ನೇ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ 15 ಹಾಗೂ ಶಿಖರ್ ಧವನ್ 16ನೇ ಸ್ಥಾನ ಪಡೆದಿದ್ದಾರೆ.