ಭಾರತ-ಇಂಗ್ಲೆಂಡ್ ಏಕದಿನ: 6 ವಿಕೆಟ್ ಕಬಳಿಸಿ ಕುಲದೀಪ್ ಬರೆದ ದಾಖಲೆ ಯಾವುದು?

First Published 12, Jul 2018, 9:12 PM IST
Kuldeep Yadav creates ODI history with figures of 6 for 25 vs England
Highlights

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನದಲ್ಲಿ ಕುಲದೀಪ್ ಯಾದವ್ 6 ವಿಕೆಟ್ ಕಬಳಿಸಿ ಹಲವು ದಾಖಲೆ ಬರೆದಿದ್ದಾರೆ. ಹಾಗಾದರೆ ಕುಲದೀಪ್ ಬರೆದ ದಾಖಲೆ ಯಾವುದು? ಇಲ್ಲಿದೆ ಡಿಟೇಲ್ಸ್

ನಾಟಿಂಗ್‌ಹ್ಯಾಮ್(ಜು.12): ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ 6 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 6 ವಿಕೆಟ್ ಕಬಳಿಸಿದ ಮೊದಲ ಎಡಗೈ ಸ್ಪಿನ್ನರ್ ಅನ್ನೋ ಹೆಗ್ಗಳಿಕೆಗೆ ಕುಲದೀಪ್ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ತಂಡದ ಪ್ರಮುಖ 6 ವಿಕೆಟ್ ಕಬಳಿಸಿದ ಕುಲದೀಪ್ ಇದೇ ಮೊದಲ ಬಾರಿಗೆ ಏಕದಿನದಲ್ಲಿ 5 ವಿಕೆಟ್ ಗೊಂಚಲು ಸಾಧನೆ ಮಾಡಿದರು. 25 ರನ್ ನೀಡಿ 6 ವಿಕೆಟ್ ಕಬಳಿಸಿದ ಕುಲದೀಪ್ ಇಂಗ್ಲೆಂಡ್ ನೆಲದಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.

ಕುಲದೀಪ್ ಸ್ಪಿನ್ ಮೋಡಿಯಿಂದ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 268 ರನ್‌ಗೆ ಆಲೌಟ್ ಆಯಿತು. ಕುಲದೀಪ್ ಯಾದವ್ ಸ್ಪಿನ್ ದಾಳಿಯಿಂದ ಜೇಸನ್ ರಾಯ್,  ಜಾನಿ ಬೈರಿಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಹಾಗೂ ಡೇವಿಡ್ ವಿಲೆ ವಿಕೆಟ್ ಕಬಳಿಸಿದರು

loader