ಭಾರತ-ಇಂಗ್ಲೆಂಡ್ ಏಕದಿನ: ಆಂಗ್ಲರ 3ನೇವಿಕೆಟ್ ಪತನ

Kuldeep breaks threatening opening stand
Highlights

ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಇಂಗ್ಲೆಂಡ್ ತಂಡ ಇದೀಗ ದಿಢೀರ್ ವಿಕೆಟ್ ಕಳೆದುಕೊಂಡಿದೆ. ಆಂಗ್ಲರ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದು ಯಾರು? ಇಲ್ಲಿದೆ  ವಿವರ.

ನಾಟಿಂಗ್‌ಹ್ಯಾಮ್(ಜು.12): ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಸ್ಪಿನ್ ಮೋಡಿ ಮಾಡಿದ ಕುಲದೀಪ್ ಯಾದವ್ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟಿದ್ದಾರೆ. ಜೇಸನ್ ರಾಯ್ 38 ರನ್ ಸಿಡಿಸಿ ಔಟಾಗಿದ್ದಾರೆ. ಮೂಲಕ ಜಾನಿ ಬೈರಿಸ್ಟೋ ಹಾಗೂ ರಾಯ್ ನಡುವಿನ 73‌ ರನ್‌ಗಳ ಜೊತೆಯಾಟಕ್ಕೆ ಬ್ರೇಕ್ ಬಿತ್ತು.

ಜೋ ರೂಟ್ ಹಾಗೂ ಬೈರಿಸ್ಟೋ ಚೇತರಿಕೆ ನೀಡೋ ಪ್ರಯತ್ನ ಮಾಡಿದರು. ಆದರೆ ರೂಟ್ 3 ರನ್‌ಗಳಿಸಿ ಕುಲದೀಪ್ ಯಾದವ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.  38 ರನ್ ಸಿಡಿಸಿ ಭಾರತಕ್ಕೆ ಅಪಾಯದ ಸೂಚನೆ ನೀಡಿದ ಜಾನಿ ಬೈರಿಸ್ಟೋ 38 ರನ್ ಸಿಡಿಸಿ ಔಟಾದರು. ಈ ಮೂಲಕ ಕುಲದೀಪ್ ಯಾದವ್ 3 ಪ್ರಮುಖ ವಿಕೆಟ್ ಕಬಳಿಸಿದದ್ದಾರೆ.

ಮೊದಲ ಏಕದಿನಕ್ಕಾಗಿ ಟೀಂ ಇಂಡಿಯಾ ಹೆಚ್ಚಿನ ಬದಲಾವಣೆಗಳನ್ನ ಮಾಡಿಲ್ಲ. ಗಾಯಗೊಂಡಿರುವ ಭುವನೇಶ್ವರ್ ಕುಮಾರ್ ಬದಲು ಸಿದ್ಧಾರ್ಥ್ ಕೌಲ್ ಸ್ಥಾನ ಪಡೆದಿದ್ದಾರೆ. ಮೂಲಕ ಸಿದ್ಧಾರ್ಥ್ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
 

loader