Asianet Suvarna News Asianet Suvarna News

ಕೆಪಿಎಲ್ 2018: ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ಗೆ ಗೆಲುವು

ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಬೆಂಗಳೂರು ಬ್ಲಾಸ್ಟರ್ ಹಾಗೂ ಬೆಳಗಾವಿ ಪ್ಯಾಂಥರ್ಸ್ ನಡುವಿನ ಹೋರಾಟ ಹೈಲೈಟ್ಸ್ ಇಲ್ಲಿದೆ.

KPL 2018  bengalurur blasters beat belagavi panthers in the opening game
Author
Bengaluru, First Published Aug 15, 2018, 10:38 PM IST

ಬೆಂಗಳೂರು(ಆ.15): 7ನೇ ಆವೃತ್ತಿ ಕೆಪಿಎಲ್ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ಶಭಾರಂಭ ಮಾಡಿದೆ. ಬೆಳಗಾವಿ ಪ್ಯಾಂಥರ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು 67 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 

 

 

ಅದ್ಧೂರಿ ಉದ್ಘಾಟನಾ ಸಮಾರಂಭದ ಬಳಿಕ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಬೆಂಗಳೂರು ಬ್ಲಾಸ್ಟರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಮೂಲಕ ಮೊದಲ ಪಂದ್ಯದಲ್ಲೇ ಅಭಿಮಾನಿಗಳ ಮನರಂಜನೆ ನೀಡಿತು.

ಆರಂಭಿಕ ಕೆಬಿ ಪವನ್ 7 ರನ್ ಸಿಡಿಸಿ ಔಟಾದರು. ಆದರೆ ನಾಯಕ ರಾಬಿನ್ ಉತ್ತಪ್ಪ ಹಾಗೂ ಎಂ ವಿಶ್ವನಾಥನ್ ಅಬ್ಬರಕ್ಕೆ, ಬೆಳಗಾವಿ ಬೆಚ್ಚಿಬಿದ್ದಿತು. ವಿಶ್ವನಾಥನ್ 26 ಎಸೆತದಲ್ಲಿ 46 ರನ್ ಸಿಡಿಸಿದರೆ, ಉತ್ತಪ್ಪ 38 ಎಸೆತದಲ್ಲಿ 81 ರನ್ ಚಚ್ಚಿದರು. ಪವನ್ ದೇಶಪಾಂಡೆ ಸಿಡಿಸಿದ 46 ರನ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ನಿಗಧಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಸಿಡಿಸಿತು. 

229 ರನ್ ಬೃಹತ್ ಗುರಿ ಪಡೆದ ಬೆಳಗಾವಿ ಪ್ಯಾಂಥರ್ಸ್ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಸ್ಟಾಲಿನ್ ಹೂವಾರ್ ಶೂನ್ಯ ಸುತ್ತಿದರೆ, ಸಾದಿಕ್ ಕಿರ್ಮಾನಿ 18 ರನ್‌ ಗಳಿಸಿ ಔಟಾದರು. ದಿಕ್ಷಾಂಶು ನೇಗಿ 20 ಹಾಗೂ ನಾಯಕ ಸ್ಟುವರ್ಟ್ ಬಿನ್ನ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿದರು.

ವೇಗಿ ಹೆಚ್ ಎಸ್ ಶರತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಬೆಳಗಾವಿ ಪ್ಯಾಂಥರ್ಸ್ ದಿಟ್ಟ ಹೋರಾಟ ನೀಡೋ ಸೂಚನೆ ನೀಡಿತು. 25 ಎಸೆತದಲ್ಲಿ 49 ರನ್ ಸಿಡಿಸಿ ಶರತ್ ಔಟಾಗುತ್ತಿದ್ದಂತೆ, ಬೆಳಗಾವಿ ಮತ್ತೆ ಕುಸಿತು ಕಂಡಿತು. ಅವಿನಾಶ್ ಹಾಗೂ ಅಕ್ಷಯ್ ಬಲ್ಲಾಳ್ ಹೋರಾಟ ನೀಡಿದರೂ ಸಾಧ್ಯವಾಗಲಿಲ್ಲ.

ಬೆಳಗಾವಿ 8 ವಿಕೆಟ್ ನಷ್ಟಕ್ಕೆ161 ರನ್ ಸಿಡಿಸಿತು. ಈ ಮೂಲಕ 67 ರನ್‌ಗಳ ಸೋಲು ಅನುಭವಿಸಿತು. 7ನೇ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಶುಭಾರಂಭ ಮಾಡೋ ಮೂಲಕ ಟೂರ್ನಿ ಆರಂಭಿಸಿತು.

Follow Us:
Download App:
  • android
  • ios