ಗೇಲ್-ರಾಹುಲ್ ಅಬ್ಬರ; ಪಂಜಾಬ್'ಗೆ ಸುಲಭ ಜಯ
ಕೋಲ್ಕತಾ(ಏ.21): ಕ್ರಿಸ್ ಗೇಲ್ ಹಾಗೂ ಕೆ.ಎಲ್ ರಾಹುಲ್ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ಡೆಕ್ವರ್ಥ್ ಲೂಯಿಸ್ ನಿಯಮದಂತೆ 9 ವಿಕೆಟ್'ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಸವಾಲಿನ ದಿನ ಗುರಿ ಬೆನ್ನತ್ತಿದ ಪಂಜಾಬ್ ಮೊದಲ ವಿಕೆಟ್'ಗೆ 8.2 ಓವರ್'ಗಳಲ್ಲಿ 96 ರನ್ ಕಲೆಹಾಕಿದ್ದಾಗ ಜೋರಾಗಿ ಮಳೆ ಆರಂಭವಾಯಿತು. ಆ ನಂತರ ಪಂದ್ಯ ಆರಂಭವಾದಾಗ ಪಂಜಾಬ್'ಗೆ ಗೆಲ್ಲಲು 28 ಎಸೆತಗಳಲ್ಲಿ 29ರನ್'ಗಳ ಗುರಿ ನೀಡಲಾಗಿತ್ತು.
ರಾಹುಲ್ 27 ಎಸೆತಗಳಲ್ಲಿ 60 ರನ್ ಬಾರಿಸಿ ನರೈನ್'ಗೆ ವಿಕೆಟ್ ಒಪ್ಪಿಸಿದರು. ಇನ್ನು ಗೇಲ್ 62 ರನ್ ಬಾರಿಸಿ ಅಜೇಯರಾಗುಳಿದರು. ಗೇಲ್ ಇನಿಂಗ್ಸ್'ನಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್'ಗಳು ಸೇರಿದ್ದವು.
ಇದಕ್ಕೂ ಮೊದಲು ಕ್ರಿಸ್ ಲಿನ್(74) ಅರ್ಧಶತಕದ ನೆರವಿನಿಂದ 191 ರನ್ ಕಲೆಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
KKR: 191
ಕ್ರಿಸ್ ಲಿನ್: 74
KXIP: 126/1
ಕ್ರಿಸ್ ಗೇಲ್: 62
ಫಲಿತಾಂಶ: ಡೆಕ್ವರ್ಥ್ ಲೂಯಿಸ್ ನಿಯಮದಂತೆ ಪಂಜಾಬ್'ಗೆ 9 ವಿಕೆಟ್'ಗಳ ಜಯ.