Asianet Suvarna News Asianet Suvarna News

ಸ್ಯಾಂಡಲ್’ವುಡ್’ನಲ್ಲಿರುವ ಮಯಾಂಕ್ ಅಗರ್’ವಾಲ್ ಅಣ್ಣ ಯಾರು ಗೊತ್ತಾ..?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡಾ ಮಯಾಂಕ್ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಶುಭ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಮಯಾಂಕ್ ಅಗರ್’ವಾಲ್ ಥ್ಯಾಂಕ್ಯು ಅಣ್ಣ ಎಂದು ರೀಟ್ವೀಟ್ ಮಾಡಿದ್ದಾರೆ.

ಬೆಂಗಳೂರು[ಅ.03]: ವೆಸ್ಟ್’ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕನ್ನಡಿಗ ಮಯಾಂಕ್ ಅಗರ್’ವಾಲ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ದೇಶಿ ಕ್ರಿಕೆಟ್’ನಲ್ಲಿ ಸಂಚಲನ ಮೂಡಿಸಿರುವ ಮಯಾಂಕ್ ಟೀಂ ಇಂಡಿಯಾದಲ್ಲೂ ಮಿಂಚಲಿ ಎಂದು ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡಾ ಮಯಾಂಕ್ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಶುಭ ಕೋರಿದ್ದಾರೆ. ಇದಕ್ಕೆ ಪ್ರತಿಯಾಗಿ ಮಯಾಂಕ್ ಅಗರ್’ವಾಲ್ ಥ್ಯಾಂಕ್ಯು ಅಣ್ಣ ಎಂದು ರೀಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಕಿಚ್ಚ ಸುದೀಪ್ ಏನಂತ ಟ್ವೀಟ್ ಮಾಡಿದ್ರು ಅನ್ನೋದನ್ನು ನೀವೇ ನೋಡಿ...

Video Top Stories