Khelo India Youth Games: ಸಮರಕಲೆಯಲ್ಲೂ ಕನ್ನಡಿಗರ ಖೇಲ್..!

ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯುತ್ತಿದೆ 5ನೇ ಅವೃತ್ತಿ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌
ಕೇರಳದ ಕಳರಿಪಯಟ್ಟು, ಪಂಜಾಬ್‌ನ ಗಾಟ್ಕಾ ಸಮರ ಕಲೆಗಳನ್ನು ಸೇರ್ಪಡೆ
ಸಮರಕಲೆಯಲ್ಲಿ ಕರ್ನಾಟಕದ ಅಥ್ಲೀಟ್ಸ್‌ಗಳು ಭಾಗಿ

Khelo India Karnataka youth athletes Shining in Kalaripayattu war game

- ನಾಸಿರ್‌ ಸಜಿಪ, ಕನ್ನಡಪ್ರಭ 

ಬೆಂಗಳೂರು(ಫೆ.07): ಮಧ್ಯಪ್ರದೇಶದಲ್ಲಿ 5ನೇ ಅವೃತ್ತಿ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ ನಡೆ​ಯು​ತ್ತಿದ್ದು, ಇದರಲ್ಲಿ ಕೇರಳದ ಕಳರಿಪಯಟ್ಟು, ಪಂಜಾಬ್‌ನ ಗಾಟ್ಕಾ ಸಮರ ಕಲೆಗಳನ್ನು ಸೇರ್ಪಡೆಗೊಳಿಸಲಾಗಿದೆ. ವಿಶೇಷ ಎಂದರೆ ಈ ಕ್ರೀಡೆಗಳಲ್ಲಿ ಕರ್ನಾಟಕದ ಅಥ್ಲೀಟ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಎದುರಾಳಿಯತ್ತ ಕತ್ತಿ ಝಳಪಿಸುತ್ತಾ, ಮೇಲಕ್ಕೆ ನೆಗೆದು ಪ್ರದರ್ಶಿಸುವ ಈ ಕಲೆ ಕರ್ನಾಟಕಕ್ಕೆ ತೀರಾ ಅಪರಿಚಿತ ಅಲ್ಲದಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಅಥ್ಲೀಟ್‌ಗಳು ಸ್ಪರ್ಧಿಸುವುದು ಬಹಳ ಕಡಿಮೆ. ಆದರೆ ಈ ಬಾರಿ ಹಲವು ವಿದ್ಯಾರ್ಥಿಗಳು ಯೂತ್‌ ಗೇಮ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ಕಳರಿಗೆ ರಾಜ್ಯದ 18 ಮಂದಿ!

ಕರ್ನಾಟಕದಿಂದ ಈ ಬಾರಿ ಒಟ್ಟು 244 ಅಥ್ಲೀಟ್‌ಗಳು ಯೂತ್‌ ಗೇಮ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈ ಪೈಕಿ ರಾಜ್ಯದ ವಿವಿಧ ಕಡೆ​ಗ​ಳಿಂದ 13 ಬಾಲಕಿಯರು, 5 ಬಾಲಕರು ಸೇರಿ 18 ಮಂದಿ ಕಳರಿಪಯಟ್ಟು ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಸ್ಪರ್ಧಿಸಿ ಪದಕ ಗೆದ್ದಿದ್ದರು. ಈ ಬಾರಿ ಅಥ್ಲೀಟ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಪದಕ ಗಳಿಕೆಯೂ ಹೆಚ್ಚಾಗಲಿದೆ ಎಂದು ಕರ್ನಾ​ಟಕ ಕಳರಿ ಸಂಸ್ಥೆ ಕಾರ‍್ಯ​ದರ್ಶಿ ರಾಜೀವ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇದೇ ವೇಳೆ ನಾಲ್ವರು ಈ ಬಾರಿ ಗಾಟ್ಕಾ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದು, ಪದಕ ಗೆಲ್ಲ​ದಿ​ದ್ದರೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.

ವಿವಿಧ ವಿಭಾ​ಗ​ದಲ್ಲಿ ಸ್ಪರ್ಧೆ

ಕೂಟ​ದಲ್ಲಿ ಕಳರಿ ಸ್ಪರ್ಧೆ 4 ವಿಭಾ​ಗ​ಗಳಲ್ಲಿ ನಡೆ​ಯಲಿದೆ. ಚುವ​ಡು​ಗಲ್‌, ಹೈ ಕಿಕ್‌ ವಿಭಾ​ಗ​ದಲ್ಲಿ ವೈಯ​ಕ್ತಿಕ ಸ್ಪರ್ಧೆ ನಡೆ​ದರೆ, ತಂಡ ವಿಭಾ​ಗ​ದಲ್ಲಿ ಲಾಂಗ್‌ ಸ್ಟಾಪ್‌ ಫೈಟ್‌, ಫ್ಲೆಕ್ಸಿ​ಬಲ್‌ ಸ್ವೊರ್ಡ್‌ ಸ್ಪರ್ಧೆ​ಗಳು ನಡೆ​ಯ​ಲಿವೆ. ಇದೇ ವೇಳೆ ಗಾಟ್ಕಾ ಸ್ಪರ್ಧೆ​ಯನ್ನು ವೈಯಕ್ತಿಕ, ತಂಡ ವಿಭಾ​ಗ​ದಲ್ಲಿ ಆಡಿ​ಸ​ಲಾ​ಗು​ತ್ತ​ದೆ.

ರಾಜ್ಯದಲ್ಲಿ 73 ಕೋಚಿಂಗ್‌ ಕೇಂದ್ರ

2 ವರ್ಷಗಳ ಹಿಂದೆ ಕರ್ನಾಟಕ ಕಳರಿಪಯಟ್ಟು ಸಂಸ್ಥೆ ನೋಂದಣಿಯಾಗಿದ್ದು, ಈಗಾಗಲೇ 73 ಕಡೆಗಳಲ್ಲಿ ಕಳರಿ ತರಬೇತಿ ಕೇಂದ್ರ ತಲೆಯೆತ್ತಿವೆ. ಈ ಪೈಕಿ ಬೆಂಗಳೂರಿನಲ್ಲೇ 20ಕ್ಕೂ ಹೆಚ್ಚು ಕೇಂದ್ರಗಳಿದ್ದು, ಸಾವಿರಾರು ಮಕ್ಕಳು ತುಂಬು ಉತ್ಸಾಹದಿಂದ ಅಭ್ಯಾಸ ನಡೆಸುತ್ತಾರೆ. ಗಾಟ್ಕಾ ತರ​ಬೇತಿ ಕೇಂದ್ರ​ಗಳು ಶಿವ​ಮೊ​ಗ್ಗ​ದ ಹಲವು ಕಡೆ​ಗ​ಳ​ಲ್ಲಿದ್ದು, ಬೆಂಗ​ಳೂರು, ಮೈಸೂ​ರಿ​ನಲ್ಲೂ ಕಾರಾರ‍ಯ​ಚ​ರಿ​ಸು​ತ್ತಿವೆ ಎಂದು ಗಾಟ್ಕಾ ತಂಡ​ದ ವ್ಯವ​ಸ್ಥಾ​ಪಕ ಶಬೀರ್‌ ‘ಕನ್ನಡಪ್ರಭ’ಕ್ಕೆ ತಿಳಿ​ಸಿ​ದ್ದಾ​ರೆ.

Prime Volleyball League ಬಲಿಷ್ಠ ಅಹಮದಾಬಾದ್‌ಗೆ ಸೋಲುಣಿಸಿದ ಹೈದರಾಬಾದ್‌ ಬ್ಲ್ಯಾಕ್ ಹಾಕ್ಸ್..!

ಏನಿದು ಕಳರಿ, ಗಾಟ್ಕಾ?

‘ಯುದ್ಧಭೂಮಿ​’ ಎಂಬ ಅರ್ಥವಿ​ರುವ ಸಮರಕಲೆ​ ಕಳರಿಯ ಮೂಲ ಕೇರ​ಳ​ವಾ​ದರೂ ದೇಶದೆ​ಲ್ಲೆಡೆ, ವಿಶ್ವ​ದಾ​ದ್ಯಂತ ಸಾಕಷ್ಟುಜನ​ಪ್ರಿ​ಯತೆ ಪಡೆ​ದಿದೆ. ದೇಶದ ಅತ್ಯಂತ ಹಳೆಯ ಸಮರ ಕಲೆ ಎಂಬ ಖ್ಯಾತಿಯೂ ಕಳ​ರಿ​ಗಿದೆ. ಹಲವು ವಿಧದ ಖಡ್ಗ, ಗುರಾ​ಣಿ​ಯನ್ನು ಬಳಸಿ ಕಳರಿ ಆಡ​ಲಾ​ಗು​ತ್ತದೆ. ಗಾಟ್ಕಾ ಪಂಜಾಬ್‌ ಮೂಲದ ಯುದ್ಧ ಕೌಶಲ್ಯ ಹೊಂದಿದ ಕ್ರೀಡೆ​ಯಾ​ಗಿದ್ದು, ನಿಹಾಂಗ್‌ ಸಿಖ್‌ ಯೋಧರು ಆತ್ಮ​ರ​ಕ್ಷಣೆಗಾಗಿ ಆಡು​ತ್ತಾ​ರೆ. ಆದರೆ ಇದಕ್ಕೆ ಕೆಲವು ಕಡೆ ಖಡ್ಗದ ಜೊತೆ ಅದೇ ರೂಪದ ಕೋಲನ್ನು ಉಪ​ಯೋ​ಗಿ​ಸು​ತ್ತಾ​ರೆ.

Latest Videos
Follow Us:
Download App:
  • android
  • ios