ಐವಾಸ್‌ ಹೈಜಂಪ್‌ ಚಿನ್ನ ಪದಕವನ್ನು ಹುತಾತ್ಮ ಯೋಧರಿಗೆ ಅರ್ಪಿಸಿದ ಗಿರೀಶ್!

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರಿಗೆ  ರಾಜ್ಯದ ಪ್ಯಾರ ಅಥ್ಲೀಟ್ ಹೆಚ್.ಎನ್.ಗಿರೀಶ್ ಗೌರವ ಸಮರ್ಪಿಸಿದ್ದಾರೆ. ಶಾರ್ಜಾದಲ್ಲಿ ನಡೆಯುತ್ತಿರುವ ಐವಾಸ್ ಹೈಜಂಪ್‌ನಲ್ಲಿ ಗೆದ್ದ ಚಿನ್ನದ ಪದಕವನ್ನು ಹುತಾತ್ಮ ಯೋಧರಿಗೆ ಅರ್ಪಿಸಿದ್ದಾರೆ.

Karnataka Para athlete HN Girish tribute to Pulwama CRPF martyrs

ಶಾರ್ಜಾ(ಫೆ.19): ಇಲ್ಲಿ ನಡೆಯುತ್ತಿರುವ ಐವಾಸ್‌ ಅಂತಾರಾಷ್ಟ್ರೀಯ ಕ್ರೀಡಾಕೂಟದ ಹೈಜಂಪ್‌ನಲ್ಲಿ ಕರ್ನಾಟಕದ ಪ್ಯಾರಾ ಅಥ್ಲೀಟ್‌ ಗಿರೀಶ್‌ ಚಿನ್ನದ ಪದಕ ಜಯಿಸಿದ್ದಾರೆ. ಈ ಚಿನ್ನದ ಪದಕವನ್ನು ಪುಲ್ವಾಮ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಅರ್ಪಿಸಿದ್ದಾರೆ. ಈ ವರ್ಷದಲ್ಲಿ ಗಿರೀಶ್‌ ಗೆದ್ದ ಮೊದಲ ಪದಕವಿದು.

ಇದನ್ನೂ ಓದಿ: ಶೂಟಿಂಗ್‌ ವಿಶ್ವಕಪ್‌: ಪಾಕ್‌ ಶೂಟರ್‌ಗಳಿಗೆ ಭಾರತ ವೀಸಾ

2012ರ ಲಂಡನ್ ಪ್ಯಾರಾ ಒಲಿಂಪಿಕ್ ನ ಹೈ ಜಂಪ್ ವಿಭಾಗದಲ್ಲಿ74 ಮೀ ಎತ್ತರಕ್ಕೆ ಜಿಗಿದು ಬೆಳ್ಳಿ ಪದಕ ವಿಜೇತರಾಗಿದ್ದ ಗಿರೀಶ್ ಗೆ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ಪದ್ಮಶ್ರೀ ಪ್ರಶಸ್ತಿ 2014ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.  

ಇದನ್ನೂ ಓದಿ: ಪಾಕಿಸ್ತಾನ ಜತೆ ಕ್ರಿಕೆಟ್‌ ಸಾಧ್ಯವಿಲ್ಲ: ಐಪಿಎಲ್ ಚೇರ್ಮೆನ್

ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಈ ದಾಳಿ ನಡೆಸಿದ್ದು, ಇದೀಗ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.

Latest Videos
Follow Us:
Download App:
  • android
  • ios