ಎಡ್ಜ್‌ಬಾಸ್ಟನ್(ಆ.01): ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ 40 ರನ್ ಸಿಡಿಸುತ್ತಿದ್ದಂತೆ ದಾಖಲೆ ಬರೆದಿದ್ದಾರೆ. ಜೋ ರೂಟ್  ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 6000 ರನ್ ಪೂರೈಸಿದ ಇಂಗ್ಲೆಂಡ್‌ನ ಮೊದಲ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.

 

 

ಜೋ ರೂಟ್ 5 ವರ್ಷ 231 ದಿಗಳಲ್ಲಿ 6000 ರನ್ ಪೂರೈಸಿದರು. ಈ ಮೂಲಕ ಇಂಗ್ಲೆಂಡ್ ಹಿರಿಯ ಬ್ಯಾಟ್ಸ್‌ಮನ್ ಆಲಿಸ್ಟೈರ್ ಕುಕ್ ದಾಖಲೆ ಹಿಂದಿಕ್ಕಿದ್ದಾರೆ. ಆಲಿಸ್ಟೈರ್ ಕುಕ್ 6000 ರನ್ ಪೂರೈಸಲು 5 ವರ್ಷ 339 ದಿನ ತೆಗೆದುಕೊಂಡಿದ್ದರು.  

ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 6000 ರನ್ ಪೂರೈಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದಾರೆ. ಬ್ರಾಡ್ಮನ್ ಕೇವಲ 68 ಇನ್ನಿಂಗ್ಸ್‌ಗಳಲ್ಲಿ 6000 ರನ್ ಪೂರೈಸಿದ್ದಾರೆ. ಜೋ ರೂಟ್ 70 ಪಂದ್ಯಗಳ 127  ಇನ್ನಿಂಗ್ಸ್‌ಗಳಲ್ಲಿ 6000 ರನ್ ಪೂರೈಸಿದ್ದಾರೆ.